ಬಿಗ್ ಬಾಸ್ ಮನೆಯಲ್ಲಿ ಊಹಾಪೋಹಗಳಿಗೆ, ಪ್ರೀತಿ-ಸ್ನೇಹಗಳಿಗೇನೂ ಕಡೆಮೆ ಇಲ್ಲ. ಆ ದೊಡ್ಮನೆಗೆ ಹೋಗ್ತಾ ಇದ್ದಂತೆ ಕೆಲವರ ಮೇಲೆ ಕೆಲವರಿಗೆ ಕ್ರಶ್ ಆಗತ್ತೆ. ಇನ್ನು ಕೆಲವರಿಗೆ ಲವ್ ಆಗತ್ತೆ. ಇದೀಗ ಯಾರಿಗೆ ಯಾರ ಮೇಲೆ ಲವ್ ಆಗಿದೆ ಅಂದ್ರಾ..
ಲವ್ವು ಗಿವ್ವು ಏನಿಲ್ಲ. ಆದ್ರೆ ಬಿಗ್ ಬಾಸ್ ಮನೆಯಲ್ಲಿರುವ ಆ ಚಂದುಳ್ಳಿ ಚೆಲುವೆ ಚಂದನ, ಶೈನ್ ಶೆಟ್ರು ಮತ್ತು ದೀಪಿಕಾ ದಾಸ್ ನಡುವೆ ಸಂಬಂಧ ಬೆಳೆಸುತ್ತಿದ್ದಾಳೆ.
ಅರೆ ಇದ್ಹೇಗೆ ಅಂದ್ರಾ.. ರೀಸನ್ ಇದೆ ಸ್ವಾಮಿ. ಇತ್ತೀಚೆಗೆ ಬಿಗ್ ಬಾಸ್ ದೀಪಿಕಾ ದಾಸ್ಗೆ ಒಂದು ಟಾಸ್ಕ್ ಕೊಟ್ಟಿದೆ. ಅದೇನಂದ್ರೆ ಬಿಗ್ ಬಾಸ್ ಮನೆಯಿಂದ ಹೊರಗೋಗುವಷ್ಟರಲ್ಲಿ ಶೈನ್ ಶೆಟ್ಟಿಯ ಗಡ್ಡ ತೆಗಿಸುವುದು.
ಇದಕ್ಕಾಗಿ ಶೈನ್ ಶೆಟ್ಟಿ ಮುಂದೆ ದೀಪಿಕಾ ಕೆಲವು ಸರ್ಕಸ್ ಮಾಡುತ್ತಿದ್ದು, ಶೆಟ್ರು ಗಡ್ಡಕ್ಕೆ ಕತ್ತರಿ ಹಾಕೋಕೆ ಏನೇನೋ ಪ್ಲಾನ್ ಮಾಡುತ್ತಿದ್ದಾರೆ. ಹೀಗೆ ಮಾತನಾಡುವಾಗ ನನ್ ಬಾಯ್ಫ್ರೆಂಡ್ ಇದ್ದಿದ್ರು ಇದೇ ರೀತಿ ಗಡ್ಡ ತೆಗಿ ಅಂತ ಹೇಳ್ತಿದ್ದೆ ಎಂದು ದೀಪಿಕಾ ದಾಸ್ ಹೇಳಿದ್ರು.
ಇನ್ನು ದೀಪಿಕಾರನ್ನ ನೋಡುತ್ತ ಶೈನ್ ಶೆಟ್ರು ಯಾವುದೋ... ಈ ಬೊಂಬೆ ಯಾವುದೋ.. ಎಂದು ಸಾಂಗ್ ಹೇಳಿದ್ರು. ಇದನ್ನು ಕೇಳಿಸಿಕೊಂಡು ಪಕ್ಕದಲ್ಲೇ ಇದ್ದ, ಚಂದನ ಅತ್ತಿಗೆ.. ಅತ್ತಿಗೆ... ಅತ್ತಿಗೆ ಅಂತ ಜೋರಾಗಿ ಕೂಗಿದ್ದೂ ಉಂಟು.
ಇದೆಲ್ಲ ನೋಡ್ತಿದ್ರೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಏನಾದ್ರು ಲವ್ವಿ ಡವ್ವಿ ಶುರುವಾಗುತ್ತಾ ಅನಿಸುತ್ತದೆ.
-
ಶೈನ್ ಗಡ್ಡ ಶೇವ್ ಮಾಡ್ಸೋದು ದೀಪಿಕಾಗೆ ಕಷ್ಟ ಆಗ್ತಿದೆ, ಗಡ್ಡ ಸೇವ್ ಮಾಡ್ಕೊಳ್ಳೋದು ಶೈನ್ ಶೆಟ್ರಿಗೆ ಕಷ್ಟ ಆಗ್ತಿದೆ
— Colors Kannada (@ColorsKannada) November 27, 2019 " class="align-text-top noRightClick twitterSection" data="
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada pic.twitter.com/5pUrA88vfv
">ಶೈನ್ ಗಡ್ಡ ಶೇವ್ ಮಾಡ್ಸೋದು ದೀಪಿಕಾಗೆ ಕಷ್ಟ ಆಗ್ತಿದೆ, ಗಡ್ಡ ಸೇವ್ ಮಾಡ್ಕೊಳ್ಳೋದು ಶೈನ್ ಶೆಟ್ರಿಗೆ ಕಷ್ಟ ಆಗ್ತಿದೆ
— Colors Kannada (@ColorsKannada) November 27, 2019
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada pic.twitter.com/5pUrA88vfvಶೈನ್ ಗಡ್ಡ ಶೇವ್ ಮಾಡ್ಸೋದು ದೀಪಿಕಾಗೆ ಕಷ್ಟ ಆಗ್ತಿದೆ, ಗಡ್ಡ ಸೇವ್ ಮಾಡ್ಕೊಳ್ಳೋದು ಶೈನ್ ಶೆಟ್ರಿಗೆ ಕಷ್ಟ ಆಗ್ತಿದೆ
— Colors Kannada (@ColorsKannada) November 27, 2019
ಬಿಗ್ಬಾಸ್ | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada pic.twitter.com/5pUrA88vfv