ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ರಿಲೀಸ್ಗೆ ರೆಡಿಯಾಗಿ ತುಂಬಾ ದಿನವಾಯ್ತು. ಆದರೆ, ಹಲವು ಕಾರಣಾಂತರಗಳಿಂದ ಬಿಡುಗಡೆಯ ಭಾಗ್ಯ ಸಿಕ್ಕಿರಲಿಲ್ಲ. ಇದೀಗ ಚಿತ್ರತಂಡದಿಂದ ಗುಡ್ ನ್ಯೂಸ್ ಹೊರಬಿದ್ದಿದೆ.
ಹೌದು, ಲೋಕಸಭಾ ಚುನಾವಣೆ ಹಿನ್ನೆಲೆ ಕುರುಕ್ಷೇತ್ರ ರಿಲೀಸ್ ಪೋಸ್ಟ್ಪೋನ್ ಆಗಿತ್ತು. ಆದ್ರೀಗ ಶೀಘ್ರದಲ್ಲೇ ಕುರುಕ್ಷೇತ್ರ ಥಿಯೇಟರ್ಗೆ ಲಗ್ಗೆಯಿಡುವ ಸೂಚಿನೆ ಸಿಕ್ಕಿದೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಏನಂದ್ರೆ ದಚ್ಚುವಿನ ಈ ಚಿತ್ರ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇಂದು ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿನ ಸಿನಿಮಾದ ಪೋಸ್ಟರ್ಗಳು ರಿಲೀಸ್ ಆಗಿದ್ದು, ಅಭಿಮಾನಿಗಳ ಕುತೂಹಲ ಕೆರಳಿಸುತ್ತಿದೆ.
ಇನ್ನು ಇನ್ನಷ್ಟೆ ಚಿತ್ರತಂಡ ಆಡಿಯೋ ಬಿಡುಗಡೆ ಮಾಡಲಿದೆ. ಅಲ್ಲದೇ ರಿಲೀಸ್ ಡೇಟ್ ರಿವೀಲ್ ಮಾಡಲಿದೆ. ಪೌರಾಣಿಕ ಸಿನಿಮಾ 'ಮುನಿರತ್ನ ಕುರುಕ್ಷೇತ್ರ'ವನ್ನು ನಾಗಣ್ಣ ನಿರ್ದೇಶಿಸಿದ್ದಾರೆ. ಬಹುತಾರಾಗಣವುಳ್ಳ ಚಿತ್ರದಲ್ಲಿ ರೆಬಲ್ ಸ್ಟಾರ್ ಅಂಬರೀಶ್, ರವಿಚಂದ್ರನ್,ಅರ್ಜುನ್ ಸರ್ಜಾ, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್, ಹರಿಪ್ರಿಯಾ ಸೇರಿದಂತೆ ನೂರಾರು ಕಲಾವಿದರು ನಟಿಸಿದ್ದಾರೆ.