ನವರಸ ನಾಯಕ ಜಗ್ಗೇಶ್ ಇಂದು 58 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜಗ್ಗೇಶ್ ಅಭಿಮಾನಿಗಳು, ಸ್ಯಾಂಡಲ್ವುಡ್ ಗಣ್ಯರು ನಿನ್ನೆ ರಾತ್ರಿಯಿಂದಲೇ ಮೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭ ಕೋರುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಜಗ್ಗೇಶ್ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.
![Darshan FB post](https://etvbharatimages.akamaized.net/etvbharat/prod-images/11041486_136_11041486_1615962985987.png)
ಕೆಲವು ದಿನಗಳ ಹಿಂದೆ ಜಗ್ಗೇಶ್ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿ ವಿವಾದ ಹುಟ್ಟುಹಾಕಿತ್ತು. ಆ ಸಮಯದಲ್ಲಿ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ 'ತೋತಾಪುರಿ' ಚಿತ್ರೀಕರಣ ನಡೆಯುವ ವೇಳೆ ಜಗ್ಗೇಶ್ಗೆ ಘೇರಾವ್ ಹಾಕಿದ್ದರು. ದರ್ಶನ್ ಅವರನ್ನು ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದಿದ್ದರು. ನಾನು ತಪ್ಪು ಮಾಡಿಲ್ಲ ಎಂದು ಜಗ್ಗೇಶ್ ಹೇಳಿದರೂ ಕೊನೆಗೆ ಕ್ಷಮೆ ಕೇಳಿದ್ದರು. ಈ ಘಟನೆ ಬಳಿಕ ಇನ್ನು ಜಗ್ಗೇಶ್ ಹಾಗೂ ದರ್ಶನ್ ಬಾಂಧವ್ಯ ಇಲ್ಲಿಗೆ ಮುಗಿಯಿತು ಎಂದು ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ದರ್ಶನ್, ಜಗ್ಗೇಶ್ ಹುಟ್ಟುಹಬ್ಬಕ್ಕೆ ಶುಭ ಕೋರುವ ಮೂಲಕ ಆ ಮಾತನ್ನು ಸುಳ್ಳಾಗಿಸಿದ್ದಾರೆ. "ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್ ಅಣ್ಣ" ಎಂದು ದರ್ಶನ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಮನಸ್ತಾಪ ಮರೆತು ದರ್ಶನ್, ಜಗ್ಗೇಶ್ ಅವರಿಗೆ ಶುಭ ಕೋರಿರುವುದು ಅಭಿಮಾನಿಗಳಲ್ಲಿ ಖುಷಿ ಉಂಟಾಗಿದೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಿಂದ ದೂರ ಉಳಿಯಲು ಆಮೀರ್ ಖಾನ್ ನಿರ್ಧಾರ...!
ಇನ್ನು ಈ ಘಟನೆ ನಂತರ 'ರಂಗನಾಯಕ' ಸಿನಿಮಾ ಕೂಡಾ ನಿಲ್ಲಬಹುದಾ ಎಂಬ ಅನುಮಾನ ಎಲ್ಲರನ್ನೂ ಕಾಡಿತ್ತು. ಏಕೆಂದರೆ ಆಡಿಯೋದಲ್ಲಿ ಜಗ್ಗೇಶ್, 'ರಂಗನಾಯಕ' ನಿರ್ಮಾಪಕ ವಿಖ್ಯಾತ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿತ್ತು. ಆಡಿಯೋ ವೈರಲ್ ಆದ ನಂತರ ಇನ್ನು ಸಿನಿಮಾ ಶುರು ಆದಂತೆಯೇ ಎಂದು ಎಲ್ಲರೂ ಅಂದುಕೊಂಡರು. ಆದರೆ ವಿಖ್ಯಾತ್ ಕೂಡಾ 'ರಂಗನಾಯಕ' ಪೋಸ್ಟರ್ ಜೊತೆಗೆ ಜಗ್ಗೇಶ್ಗೆ ಹುಟ್ಟುಹಬ್ಬದ ಶುಭ ಕೋರಿದ್ದು ಈ ಮೂಲಕ 'ರಂಗನಾಯಕ' ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.