ETV Bharat / sitara

ರಾಬರ್ಟ್ ನಂತರ 'ಗೋಲ್ಡ್ ರಿಂಗ್' ಹಿಡಿದು ಹೊರಟ ಚಾಲೆಂಜಿಂಗ್ ಸ್ಟಾರ್​​​ - Darshan new movie Gold ring

'ರಾಬರ್ಟ್' ಸಿನಿಮಾ ಮಾರ್ಚ್ 11 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ನಂತರ ದರ್ಶನ್ 'ಗೋಲ್ಡ್ ರಿಂಗ್​' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ರಾಕ್​​ಲೈನ್ ವೆಂಕಟೇಶ್ ಪುತ್ರ ಯತೀಶ್ ನಿರ್ಮಾಣ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

Darshan new movie
ಚಾಲೆಂಜಿಂಗ್ ಸ್ಟಾರ್​​​
author img

By

Published : Mar 6, 2021, 9:23 AM IST

ದರ್ಶನ್ ಅಭಿನಯದ ರಾಜವೀರ ಮದಕರಿ ನಾಯಕ ಚಿತ್ರದ ಬಗ್ಗೆ ಇಂದಿಗೂ ಸರಿಯಾದ ಸ್ಪಷ್ಟನೆ ದೊರೆತಿಲ್ಲ. ಈ ಸಿನಿಮಾ ಇನ್ನು ನಿಂತಂತೆಯೇ ಎಂದು ಕೆಲವರು ಹೇಳಿದರೆ ಮತ್ತೊಂದು ಮೂಲಗಳ ಪ್ರಕಾರ ಸಿನಿಮಾ ತಡವಾಗಿ ಆರಂಭವಾಗುವುದು ಎನ್ನಲಾಗುತ್ತಿದೆ. ಕೊರೊನಾದಿಂದ ಚಿತ್ರರಂಗ ನಷ್ಟದಲ್ಲಿರುವಾಗ ಬಿಗ್ ಬಜೆಟ್ ಸಿನಿಮಾ ಮಾಡುವುದು ಸರಿಯಲ್ಲ ಎಂದು ರಾಕ್​​ಲೈನ್ ವೆಂಕಟೇಶ್ ಹಾಗೂ ದರ್ಶನ್ ನಿರ್ಧರಿಸಿದ್ದಾರಂತೆ.

Darshan new movie
ರಾಕ್​ಲೈನ್ ವೆಂಕಟೇಶ್, ದರ್ಶನ್

ಇದನ್ನೂ ಓದಿ: ವಿಶೇಷ ಚೇತನ ಮಕ್ಕಳೊಂದಿಗೆ ನಟ ದರ್ಶನ್‌: ವಿಡಿಯೋ ನೋಡಿ

ಈ ನಡುವೆ ದರ್ಶನ್ ರಾಕ್​ಲೈನ್ ವೆಂಕಟೇಶ್ ಪುತ್ರ ಯತೀಶ್​​ ಸಿನಿಮಾದಲ್ಲಿ ನಟಿಸಲಿದ್ದು ಆ ಚಿತ್ರಕ್ಕೆ 'ಗೋಲ್ಡ್​​ ರಿಂಗ್​' ಎಂದು ಹೆಸರು ಇಡಲಾಗಿದೆಯಂತೆ. ಈ ವಿಚಾವನ್ನು ರಾಕ್​ಲೈನ್ ವೆಂಕಟೇಶ್ ಪುತ್ರ ಯತೀಶ್ ಹೇಳಿಕೊಂಡಿದ್ದಾರೆ. ಈ ಹಿಂದೆ ಒಂದೆರೆಡು ಚಿತ್ರಗಳಿಗೆ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ ಅನುಭವವಿರುವ ಯತೀಶ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗುತ್ತಿದ್ದಾರೆ. 'ಗೋಲ್ಡ್ ರಿಂಗ್' ಬಗ್ಗೆ ಹೇಳುವುದಾದರೆ ಕಥೆ ಮತ್ತು ಟೈಟಲ್​​​​​​​​​​​​ ಫೈನಲೈಸ್ ಆಗಿರುವುದು ಬಿಟ್ಟರೆ, ಮಿಕ್ಕಂತೆ ಏನೂ ಪಕ್ಕಾ ಇಲ್ಲವಂತೆ. ಈ ಚಿತ್ರವನ್ನು ಯಾರು ನಿರ್ದೇಶಿಸುತ್ತಾರೆ, ಯಾರೆಲ್ಲಾ ತಂತ್ರಜ್ಞರು ಈ ಚಿತ್ರದಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಯಾರೆಲ್ಲಾ ಕಲಾವಿದರು ನಟಿಸುತ್ತಾರೆ ಎಂಬ ವಿಷಯವನ್ನು ಯತೀಶ್ ಬಹಿರಂಗಪಡಿಸಿಲ್ಲ. ಸದ್ಯಕ್ಕೆ ಈ ವಿಷಯಗಳ ಕುರಿತು ಚರ್ಚೆ ನಡೆಯುತ್ತಿದ್ದು, ಇನ್ನೆರೆಡು ತಿಂಗಳುಗಳಲ್ಲಿ ಈ ಚಿತ್ರದ ಬಗ್ಗೆ ಪೂರ್ಣ ವಿವರ ಸಿಗುವ ಸಾಧ್ಯತೆ ಇದೆ.

Darshan new movie
ಯತೀಶ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.