ಪ್ರೀತಿಗೆ ಶರಣಾಗುವ ‘ದಾಸ’ ದರ್ಶನ್, ನಟ ಲೂಸ್ ಮಾದ ಯೋಗಿ ಅವರ ಮೇಲಿನ ಸ್ನೇಹಕ್ಕೆ '9ನೇ ದಿಕ್ಕು' ಸಿನಿಮಾದ ಕೆಲವು ಸಂಭಾಷಣೆಗೆ ದನಿಯಾಗಿದ್ದಾರೆ. ದರ್ಶನ್ ಈ ಹಿಂದೆ ಸಹ ಕೆಲವು ಸಿನಿಮಾಗಳ ಸಂಭಾಷಣೆಗೆ ವಾಯ್ಸ್ ನೀಡಿದ್ದರು.
ಇನ್ನು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ '9ನೇ ದಿಕ್ಕು' ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಡಿ ಪಿಕ್ಚರ್ಸ್ ಹಾಗೂ ಕೆ 9 ಸ್ಟುಡಿಯೋದಲ್ಲಿ ನಿರ್ಮಾಣವಾಗುತ್ತಿರುವ '9ನೇ ದಿಕ್ಕು' ಸಿನಿಮಾ ಕಳೆದ ಸೆಪ್ಟೆಂಬರ್ನಲ್ಲಿ ಸೆಟ್ಟೇರಿದೆ. ಇನ್ನು ಇದೇ 15ರಂದು ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಲಿದ್ದು, ಟೀಸರ್ನಲ್ಲಿಯೂ ದರ್ಶನ್ ಧ್ವನಿ ಕೇಳಿಸಲಿದೆಯಂತೆ.