ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಫೆಬ್ರವರಿ 28 ರಂದು ಹುಬ್ಬಳ್ಳಿಯಲ್ಲಿ ಹಾಗೂ ಇಂದು ಸಂಜೆ ಹೈದರಾಬಾದ್ನಲ್ಲಿ 'ರಾಬರ್ಟ್' ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
'ರಾಬರ್ಟ್' ಸಿನಿಮಾದಲ್ಲಿ ದರ್ಶನ್ ಎರಡು ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು ಸಿನಿಮಾ ನೋಡಲು ಡಿ ಬಾಸ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಆರಂಭವಾಗಲಿರುವ 'ರಾಬರ್ಟ್' ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಲು ದರ್ಶನ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಇನ್ನಿತರರು ನಿನ್ನೆಯೇ ಹೈದರಾಬಾದ್ ಬಂದು ತಲುಪಿದ್ದಾರೆ. ಕಾರ್ಯಕ್ರಮದಲ್ಲಿ ತೆಲುಗು ಸ್ಟೈಲಿಷ್ ಸ್ಟಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೋಟಿಗೊಬ್ಬ-3 ನಿರ್ಮಾಪಕರ ವಿರುದ್ಧ ಕಿಚ್ಚನ ಫ್ಯಾನ್ಸ್ ಬೇಸರ : ಕಾರಣ!
ಹೈದರಾಬಾದ್ ಫಿಲ್ಮ್ ನಗರ್ ಜೆಆರ್ಸಿ ಕನ್ವೆನ್ಷನ್ ಹಾಲ್ನಲ್ಲಿ ಇಂದು ಸಂಜೆ 6ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ದರ್ಶನ್, ನಾಯಕಿ ಆಶಾ ಭಟ್, ರವಿಕಿಶನ್, ಜಗಪತಿಬಾಬು, ವಿನೋದ್ ಪ್ರಭಾಕರ್, ದೇವರಾಜ್, ನಿರ್ಮಾಪಕ ಉಮಾಪತಿ, ನಿರ್ದೇಶಕ ತರುಣ್ ಸುಧೀರ್, ತೆಲುಗಿನ ನಿರ್ಮಾಪಕರು, ಸಿನಿಮಾ ವಿತರಕರು ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ವಿಶೇಷ ಎಂದರೆ ದರ್ಶನ್ ಅಭಿಮಾನಿಗಳು ಸುಮಾರು 50 ಬಸ್ಗಳಲ್ಲಿ ಬೆಂಗಳೂರಿನಿಂದ ಹೈದರಾಬಾದಿಗೆ ಹೋಗಿದ್ದಾರೆ ಎನ್ನಲಾಗಿದೆ. 'ಕುರುಕ್ಷೇತ್ರ' ಸಿನಿಮಾ ಬಳಿಕ ತೆಲುಗು ಇಂಡಸ್ಟ್ರಿಯಲ್ಲಿ 'ರಾಬರ್ಟ್' ಸಿನಿಮಾಗೆ ಯಾವ ರೀತಿಯ ಪ್ರಶಂಸೆ ಸಿಗಲಿದೆ ಎನ್ನುವುದು ಮಾರ್ಚ್ 11ರಂದು ತಿಳಿಯಲಿದೆ.