ಡ್ಯಾನ್ಸಿಂಗ್ ಕಿಂಗ್ ಪ್ರಭುದೇವ ಅವರನ್ನು ನಾವು ಇದುವರೆಗೂ ಲವರ್ ಬಾಯ್, ಡ್ಯಾನ್ಸರ್ ಹಾಗೂ ಮೃದು ಸ್ವಭಾವದ ನಾಯಕನನ್ನಾಗಿ ತೆರೆ ಮೇಲೆ ನೋಡಿದ್ದೇವೆ. ಆದರೆ ಇದೇ ಮೊದಲ ಬಾರಿಗೆ 'ಬಘೀರ' ಚಿತ್ರದ ಮೂಲಕ ಅವರನ್ನು ಬಹಳ ವಿಭಿನ್ನ ಪಾತ್ರದಲ್ಲಿ ಅಭಿಮಾನಿಗಳು ತೆರೆ ಮೇಲೆ ನೋಡಲಿದ್ದಾರೆ.
- " class="align-text-top noRightClick twitterSection" data="">
ಇದನ್ನೂ ಓದಿ: "ನಿಮ್ಮ ಪ್ರೀತಿ ಅಭಿಮಾನಕ್ಕೆ ಕೊನೆಯವರೆಗೂ ಚಿರಋಣಿ ಆಗಿರ್ತೀನಿ"ಎಂದ ಚಿರು
'ಬಘೀರ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಪ್ರಭುದೇವ, ಡೆಡ್ಲಿ ಸೈಕೋ ಕಿಲ್ಲರ್ ಆಗಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಗೆಟಪ್ನಲ್ಲಿ ಪ್ರಭುದೇವ ಗರ್ಲ್ಫ್ರೆಂಡ್ಸ್ ಜೊತೆ ರೊಮ್ಯಾನ್ಸ್ ಮಾಡಿ ನಂತರ ಅವರನ್ನು ಕೊಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಯರ ದುಸ್ತರ್, ರಮ್ಯ ನಂಬೀಸನ್, ಸಂಚಿತಾ ಶೆಟ್ಟಿ, ಗಾಯತ್ರಿ ಶಂಕರ್, ಜನನಿ ಅಯ್ಯರ್, ಸಾಕ್ಷಿ ಅಗರ್ವಾಲ್ ಹಾಗೂ ಸೋನಿಯಾ ಅಗರ್ವಾಲ್ ಈ ಟೀಸರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಘೀರ ಮುರಳೀಧನ್ ಎಂಬ ಪಾತ್ರದಲ್ಲಿ ಪ್ರಭುದೇವ ನಟಿಸಿದ್ದಾರೆ. 'ತ್ರಿಶಾ ಇಲಿಯಾನಾ ನಯನತಾರಾ' ಹಾಗೂ 'ಎಎಎ' ಚಿತ್ರಗಳನ್ನು ನಿರ್ದೇಶಿಸಿದ್ದ ಅಧಿಕ್ ರವಿಚಂದ್ರನ್ 'ಬಘೀರ' ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರಭುದೇವ ಹಾಗೂ ಗೌತಮಿ ಹೆಜ್ಜೆ ಹಾಕಿದ್ದ "ಚುಕು ಬುಕು ಚುಕು ಬುಕು ರೈಲೇ..."ಹಾಡಿನ ಸಾಲನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಸಿನಿಮಾ ಬಾಕ್ಸ್ ಆಫೀಸನ್ನು ದೋಚುವುದರಲ್ಲಿ ಸಂದೇಹವೇ ಇಲ್ಲ ಎಂಬುದು ಟೀಸರ್ ನೋಡಿದವರ ಅಭಿಪ್ರಾಯವಾಗಿದೆ. ಭರತನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್.ವಿ. ಭರತನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗಣೇಶನ್ ಶೇಖರ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.