ಸಲ್ಮಾನ್ ಖಾನ್ ಹಾಗೂ ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ 'ದಬಾಂಗ್-3' ಡಬ್ಬಿಂಗ್ ಸಿನಿಮಾ ಇದೇ 29ರಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಭಾನುವಾರ ಮಧ್ಯಾಹ್ನ 3ಗಂಟೆಗೆ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ನೀಡಲಿದೆ.
![Dabbang 3 Cinema will be broadcast on Zee TV this Sunday](https://etvbharatimages.akamaized.net/etvbharat/prod-images/kn-bng-02-dabang3-movie-photo-ka10018_27112020183656_2711f_1606482416_699.jpg)
ಪ್ರಥಮ ಬಾರಿಗೆ ಸಲ್ಮಾನ್ ಖಾನ್ ತಾವೇ ಕನ್ನಡಕ್ಕೆ ಡಬ್ಬಿಂಗ್ ಮಾಡಿರುವುದು ಈ ಸಿನಿಮಾದ ವಿಶೇಷ. ಈ ಚಿತ್ರವನ್ನು ಪ್ರಭುದೇವ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಎಎಸ್‌ಪಿ ಚುಲ್ ಬುಲ್ ಪಾಂಡೆಯಾಗಿ ಮನರಂಜನೆ ನೀಡುತ್ತಲೇ ದುಷ್ಟರನ್ನು ಹೆಡೆಮುರಿ ಕಟ್ಟುತ್ತಾರೆ.
![Dabbang 3 Cinema will be broadcast on Zee TV this Sunday](https://etvbharatimages.akamaized.net/etvbharat/prod-images/kn-bng-02-dabang3-movie-photo-ka10018_27112020183656_2711f_1606482416_569.jpg)
ಸೋನಾಕ್ಷಿ ಸಿನ್ಹಾ, ಸಾಯಿ ಮಂಜ್ರೀಕರ್, ಅರ್ಬಾಜ್ ಖಾನ್, ಮಹೇಶ್ ಮಂಜ್ರೇಕರ್ ಮುಂತಾದವರು ನಟಿಸಿದ್ದಾರೆ. ಸಾಜಿದ್-ವಜೀದ್ ಸಂಗೀತ, ಮಹೇಶ್ ಲಿಮಯೆ ಛಾಯಾಗ್ರಹಣ ಹೊಂದಿರುವ ಈ ಚಿತ್ರವನ್ನು ಸಲ್ಮಾನ್ ಖಾನ್ ಫಿಲ್ಮ್ಸ್ ಬ್ಯಾನರ್ ಅಡಿ ಅರ್ಬಾಜ್ ಖಾನ್ ನಿರ್ಮಿಸಿದ್ದಾರೆ.