ಹೆಡ್‌ಬುಷ್ ಚಿತ್ರದ ಟೀಸರ್ ಜೊತೆಗೆ ಟ್ವೀಟ್ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ' ಚಿತ್ರ ಬಳಗ ಹಾಗೂ ಮಲಯಾಳಂ ಸೂಪರ್‌ಸ್ಟಾರ್ ದುಲ್ಕರ್ ಸಲ್ಮಾನ್ ಇಂದು ಹುಟ್ಟುಹಬ್ಬದ ಸಂಭ್ರದಲ್ಲಿರುವ ಸ್ಯಾಂಡಲ್ವುಡ್ನ ಡಾಲಿ ಧನಂಜಯ್ಗೆ ಶುಭಾಶಯ ಕೋರಿದ್ದಾರೆ.
ಅಗ್ನಿ ಶ್ರೀಧರ್ ಅವರ 'ದಾದಾಗಿರಿಯ ಆ ದಿನಗಳು' ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ ಚಿತ್ರ ಇದಾಗಿದ್ದು, ಬೆಂಗಳೂರನ್ನು ಆಳಿದ ಭೂಗತ ಲೋಕದ ದೊರೆ ಡಾನ್ ಜಯರಾಜ್ ಪಾತ್ರದಲ್ಲಿ ನಟ 'ಡಾಲಿ' ಧನಂಜಯ್ ಕಾಣಿಸಿಕೊಂಡಿದ್ದಾರೆ. ಡಾಲಿ ಧನಂಜಯ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗಿರುವ ಮೊದಲ ಅಂಡರ್‌ವರ್ಡ್ ಡಾನ್ ಜಯರಾಜ್ ಜೀವನ ಚರಿತ್ರೆ ಆಧಾರಿತ 'ಹೆಡ್ ಬುಷ್'ನ ಫಸ್ಟ್ ಲುಕ್ ಟೀಸರ್ ಇಲ್ಲಿದೆ ಎಂದು ದುಲ್ಕರ್ ಸಲ್ಮಾನ್ ಟ್ವೀಟ್ ಮಾಡಿದ್ದಾರೆ.
-
Wishing @Dhananjayaka a very happy birthday ! On his birthday here is the first look teaser of HEAD BUSH, the biopic of First Underworld Don M P Jayaraj ! @Dhananjayaka @agni_sreedhar @DirectorShoonya @baadalvirus @charanrajmr2701 @starlingpayalhttps://t.co/JgWwlk1EZF
— dulquer salmaan (@dulQuer) August 23, 2021 " class="align-text-top noRightClick twitterSection" data="
">Wishing @Dhananjayaka a very happy birthday ! On his birthday here is the first look teaser of HEAD BUSH, the biopic of First Underworld Don M P Jayaraj ! @Dhananjayaka @agni_sreedhar @DirectorShoonya @baadalvirus @charanrajmr2701 @starlingpayalhttps://t.co/JgWwlk1EZF
— dulquer salmaan (@dulQuer) August 23, 2021Wishing @Dhananjayaka a very happy birthday ! On his birthday here is the first look teaser of HEAD BUSH, the biopic of First Underworld Don M P Jayaraj ! @Dhananjayaka @agni_sreedhar @DirectorShoonya @baadalvirus @charanrajmr2701 @starlingpayalhttps://t.co/JgWwlk1EZF
— dulquer salmaan (@dulQuer) August 23, 2021
ಇನ್ನು ಅಲ್ಲು ಅರ್ಜುನ್ ನಾಯಕರಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ'ದಲ್ಲಿಯೂ ಸಹ ನಟ ಡಾಲಿ ಧನಂಜಯ್ 'ಜಾಲಿ ರೆಡ್ಡಿ'ಯಾಗಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರತಂಡವೂ ಸಹ ಶುಭಾಶಯ ತಿಳಿಸಿದೆ. ತೆಲುಗಿನ ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪುಷ್ಪ ಚಿತ್ರ ಇದಾಗಿದ್ದು, ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಹೊಂದಲಾಗಿದೆ.
-
Thanks @PushpaMovie , proud to be part of you❤️#ThaggedheLe 🤙 #PushpaTheRise https://t.co/tkc9Lf9lvd
— Dhananjaya (@Dhananjayaka) August 23, 2021 " class="align-text-top noRightClick twitterSection" data="
">Thanks @PushpaMovie , proud to be part of you❤️#ThaggedheLe 🤙 #PushpaTheRise https://t.co/tkc9Lf9lvd
— Dhananjaya (@Dhananjayaka) August 23, 2021Thanks @PushpaMovie , proud to be part of you❤️#ThaggedheLe 🤙 #PushpaTheRise https://t.co/tkc9Lf9lvd
— Dhananjaya (@Dhananjayaka) August 23, 2021
ಆರ್ಯ ಹಾಗೂ ಆರ್ಯ 2 ಚಿತ್ರಗಳನ್ನು ನಿರ್ದೇಶಿಸಿದ್ದ ಸುಕುಮಾರ್ ನಿರ್ದೇಶನದ ಈ ಚಿತ್ರವು ತೆಲುಗು, ಕನ್ನಡ, ಮಲಯಾಳಂ, ಹಿಂದಿ, ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ನ್ಯಾಷನಲ್ ಕ್ರಸ್ ರಶ್ಮಿಕಾ ಮಂದಣ್ಣ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆಗೆ ಡಾಲಿ ಮಿಂಚು ಹರಿಸಲಿದ್ದು, ಅಭಿಮಾನಿಗಳ ಕಾತರತೆ ಹೆಚ್ಚಿಸಿದೆ.
ಆರ್ಎಕ್ಸ್- 100 ಚಿತ್ರದ ಮೂಲಕ ಟಾಲಿವುಡ್‌ಗೆ ಪದಾರ್ಪಣೆ ಮಾಡಿದ್ದ ಪಾಯಲ್ ರಜಪೂತ್ ಹೆಡ್‌ಬುಷ್ ಚಿತ್ರದಲ್ಲಿ ನಾಯಕಿ ನಟಿಸುವ ಮೂಲಕ ಇದೇ ಮೊದಲ ಬಾರಿಗೆ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಒಟ್ಟು 6 ಭಾಷೆಯಲ್ಲಿ ಹೆಡ್ ಬುಷ್ ಸಿನಿಮಾ ನಿರ್ಮಾಣ ಆಗುತ್ತಿದೆ.