ETV Bharat / sitara

ಗಾಂಧಿನಗರದಲ್ಲಿ ಶುರುವಾಯ್ತು ಸೈನೈಡ್​​ ಮಲ್ಲಿಕಾಳ ಹಾವಳಿ - ಕನ್ನಡ ಸಿನಿಮಾ

ಕನ್ನಡದಲ್ಲಿ ಸೆಲಬ್ರಿಟಿಗಳ ಹಾಗೂ ಕುಖ್ಯಾತಿ ಹೊಂದಿದವರ ಜೀವನ ಚರಿತ್ರೆ ಸಿನಿಮಾಗಳು ಸಾಕಷ್ಟು ಬಂದಿವೆ. ಇದೀಗ ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಸೈನೆಡ್ ಮಲ್ಲಿಕಾಳ ಜೀವನ ಚರಿತ್ರೆ ತಯರಾಗುತ್ತಿದ್ದು, ಸಿನಿಮಾದ ಟೀಸರ್ ಬಿಡುಗಡೆಯಾಗಿದೆ.

ಸೈನೈಡ್ ಮಲ್ಲಿಕಾ
author img

By

Published : Jul 28, 2019, 7:13 PM IST

ಬೆಂಗಳೂರನ್ನು ಬೆಚ್ಚಿಬೀಳಿಸಿದ್ದ ಸೈನೈಡ್‌ ಮಲ್ಲಿಕಾಳ ಜೀವನ ಚರಿತ್ರೆ ಸ್ಯಾಂಡಲ್​​​ವುಡ್​ನಲ್ಲಿ ಸಿನಿಮಾವಾಗಿ ತಯಾರಾಗುತ್ತಿರುವುದು ತಿಳಿದಿರುವ ವಿಷಯ. ಪೋಸ್ಟರ್​​​​​​​​​​​​​​​​​ನಿಂದಲೇ ಸದ್ದು ಮಾಡಿದ್ದ ಸೈನೈಡ್ ಮಲ್ಲಿಕಾಳ ಟೀಸರ್ ಬಿಡುಗಡೆ ಆಗಿದೆ.

  • " class="align-text-top noRightClick twitterSection" data="">

'ವರ್ತಮಾನ' ಹಾಗೂ 'ಕಲಬೆರಕೆ' ಚಿತ್ರದ ಮೂಲಕ ಗಮನ ಸೆಳೆದ ಸಂಜನಾ ಪ್ರಕಾಶ್‌, ಈ ಚಿತ್ರದಲ್ಲಿ ಸೈನೈಡ್‌ ಮಲ್ಲಿಕಾ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿವೀಲ್ ಆಗಿರುವ ಟೀಸರ್​​​​​​​​​​​​​​​​​​​​​​​​ ಕೊಲೆಯ ದೃಶ್ಯಗಳು, ಸೆನ್ಸಾರ್ ಕಟ್ ಇಲ್ಲದೆ ಇರುವ ಡೈಲಾಗ್​​​​​​​​​​​ನಿಂದ ಕೂಡಿದೆ. ಸೈನೈಡ್‌ ಮಲ್ಲಿಕಾಳ ಜೀವನ ಚರಿತ್ರೆಯ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ಗುರು ಎಂಬುವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಬೆಂಗಳೂರಿನ ದೇವಸ್ಥಾನಗಳಿಗೆ ಬರುತ್ತಿದ್ದ ಶ್ರೀಮಂತ ಕುಟುಂಬದ ಮಹಿಳೆಯರ ಮೇಲೆ ಕಣ್ಣು ಹಾಕಿ ಅವರನ್ನು ಪರಿಚಯ ಮಾಡಿಕೊಂಡು, ಆಪ್ತಳಾಗುತ್ತಿದ್ದ ಮಲ್ಲಿಕಾ, ನಂತರ ಅವರಿಗೆ ಸೈನೈಡ್‌ ನೀಡಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು.

Cyanide Mallika
ಸಂಜನಾ ಪ್ರಕಾಶ್‌

2008ರಲ್ಲಿ ಈ ಸೈನೈಡ್‌ ಮಲ್ಲಿಕಾಳನ್ನು ಬಂಧಿಸಲಾಗಿತ್ತು. ಈಗ ಇದೇ ಘಟನೆ ಹಾಗೂ ಇವಳ ಜೀವನ ಚರಿತ್ರೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಸಿನಿಮಾದಲ್ಲಿ ಒಂದೇ ಒಂದು ಹಾಡು ಇದ್ದು, ಮೇಕೆದಾಟು, ಮೇಲುಕೋಟೆ, ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದ ನಿರ್ದೇಶಕ ಗುರು ಕೂಡಾ ಸಿನಿಮಾದಲ್ಲಿ ಸೈನೈಡ್‌ ಮೋಹನ್‌ ಎಂಬ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಸದ್ಯ ಗಾಂಧಿನಗರದಲ್ಲಿ ಸೈನೈಡ್ ಮಲ್ಲಿಕಾ ಟೀಸರ್ ಸದ್ದು ಮಾಡುತ್ತಿದೆ.

Cyanide Mallika
'ಸೈನೈಡ್ ಮಲ್ಲಿಕಾ' ಚಿತ್ರದ ದೃಶ್ಯ

Intro:ಗಾಂಧಿನಗರದಲ್ಲಿ ಸೈನೈಡ್ ಮಲ್ಲಿಕಾಳ ಹಾವಳಿ ಶುರು!!

ಸ್ಯಾಂಡಲ್ ವುಡ್ ನಲ್ಲಿ, ಬೆಂಗಳೂರನ್ನು ಬೆಚ್ಚಿ ಬೀಳಿಸಿದ್ದ, ಸೈನೈಡ್‌ ಮಲ್ಲಿಕಾಳ ಜೀವನ ಚರಿತ್ರೆ ಸಿನಿಮಾವಾಗುತ್ತಿರೋದು ಗೊತ್ತಿರುವ ವಿಷ್ಯ..ಪೋಸ್ಟರ್ ನಿಂದಲೇ ಸದ್ದು ಮಾಡಿ ಸೈನೈಡ್ ಮಲ್ಲಿಕಾಳ, ಟೀಸರ್ ಬಿಡುಗಡೆ ಆಗಿದೆ..ವರ್ತಮಾನ ಹಾಗು ಕಲಬೆರಕೆ ಚಿತ್ರದ ಮೂಲ್ಕ ಗಮನ ಸೆಳೆದ ಸಂಜನಾ ಪ್ರಕಾಶ್‌, ಈ ಚಿತ್ರದಲ್ಲಿ ಸೈನೈಡ್‌ ಮಲ್ಲಿಕಾ ಆಗಿ ಕಾಣಿಸಿಕೊಂಡಿದ್ದಾರೆ.ಸದ್ಯ ರಿವೀಲ್ ಆಗಿರೋ ಟೀಸರ್ ನಲ್ಲಿ ಭಯ ಹುಟ್ಟಿಸುವ ಕೊಲೆಯ ದೃಶ್ಯಗಳು, ಸೆನ್ಸಾರ್ ಕಟ್ ಇಲ್ಲದೆ ಇರುವ ತಾಯಿಯ ಬಗೆಗಿನ ಡೈಲಾಗ್ ನಿಂದ ಕೂಡಿದೆ..ಸೈನೈಡ್‌ ಮಲ್ಲಿಕಾಳ ಜೀವನವನ್ನು ಇಟ್ಟುಕೊಂಡು , ನಿರ್ದೇಶಕ ಗುರು ಎಂಬುವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ..ಬೆಂಗಳೂರಿನ ದೇವಸ್ಥಾನಗಳಿಗೆ ಬರುತ್ತಿದ್ದ ಶ್ರೀಮಂತ ಕುಟುಂಬದ, ಮಹಿಳೆಯರ ಮೇಲೆ ಕಣ್ಣು ಹಾಕಿ ಅವರನ್ನು ಪರಿಚಯ ಮಾಡಿಕೊಂಡು, ಆಪ್ತಳಾಗುತ್ತಿದ್ದಳು. ನಂತರ ಅವರಿಗೆ ಸೈನೈಡ್‌ ನಿಡಿ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. 2008ರಲ್ಲಿ ಈ ಸೈನೈಡ್‌ ಮಲ್ಲಿಕಾಳನ್ನು ಬಂಧಿಸಲಾಗಿತ್ತು. ಈಗ ಇದೇ ಘಟನೆ ಹಾಗೂ ಇವಳ ಜೀವನ ಚರಿತ್ರೆಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ..Body:ಸೈನೆಡ್‌ ಮಲ್ಲಿಕಾ ಸಿನಿಮಾದಲ್ಲಿ ಒಂದೇ ಒಂದು ಹಾಡು ಇದ್ದು, ಮೇಕೆದಾಟು, ಮೇಲುಕೋಟೆ, ಬೆಂಗಳೂರಿನ ಸುತ್ತಮುತ್ತಿಲಿನ ಪ್ರದೇಶದಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಚಿತ್ರದ ನಿರ್ದೇಶಕ ಗುರು ಕೂಡ ಸಿನಿಮಾದಲ್ಲಿ ಸೈನೆಡ್‌ ಮೋಹನ್‌ ಎಂಬ ಪಾತ್ರವನ್ನು ನಿರ್ವಹಿಸಿದ್ದಾರಂತೆ.ಸದ್ಯ ಗಾಂಧಿನಗರದಲ್ಲಿ ಸೈನೈಡ್ ಮಲ್ಲಿಕಾಳ ಟೀಸರ್ ಸದ್ದು ಮಾಡುತ್ತಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.