ಹೌದು, ಕಿರುತೆರೆಯ ಕಲಾವಿದರಿಗಾಗಿ ಕ್ರಿಕೆಟ್ ಲೀಗ್ ನಡೆಯುತ್ತಿದೆ. ಅದಕ್ಕೆ ಟೆಲಿವಿಷನ್ ಕ್ರಿಕೆಟ್ ಲೀಗ್ ಎಂದು ಕೂಡಾ ನಾಮಕರಣ ಮಾಡಲಾಗಿದೆ. ಈ ಲೀಗ್ನಲ್ಲಿ ಭಾಗವಹಿಸಲು ಕೇವಲ ಕಿರುತೆರೆ ಕಲಾವಿದರಿಗೆ ಮಾತ್ರ ಅವಕಾಶ. ಕಿರುತೆರೆ ಎಂದ ಮಾತ್ರಕ್ಕೆ ಅದು ಕೇವಲ ಧಾರಾವಾಹಿಗಳಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ಇಷ್ಟು ವರುಷ ಪ್ರಸಾರವಾಗಿರುವ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿರುವಂತಹ ಕಲಾವಿದರುಗಳಿಗೆ ಕೂಡಾ ಈ ಕ್ರಿಕೆಟ್ ಲೀಗ್ನಲ್ಲಿ ಭಾಗವಹಿಸುವ ಅವಕಾಶವಿದೆ.
![Cricket League, Cricket League for television artists, television artists Cricket League news, television artists Cricket League latest news,](https://etvbharatimages.akamaized.net/etvbharat/prod-images/kn-bng-kirutere-cricket-league-ka10018_17102019000540_1710f_1571250940_470.jpg)
ನೀವು ಕ್ರಿಕೆಟ್ ಪ್ರಿಯರು ಎಂದಾಗಿದ್ದರೆ ಇನ್ನು ತಡ ಮಾಡುವ ಅವಶ್ಯಕತೆಯಿಲ್ಲ. ಈಗಲೇ ಈ ಲಿಂಕ್ ಅನ್ನು ಒಪನ್ ಮಾಡಿ (https://forms.gle/dqxte36SmvuWaKyF7) ಆದಷ್ಟು ಬೇಗ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ. ಇದರ ಜೊತೆಗೆ ನಿಮ್ಮ ಸಹ ಕಲಾವಿದರ ಬಳಿ ಈ ವಿಚಾರವನ್ನು ಶೇರ್ ಮಾಡಲು ಕೂಡಾ ಮರೆಯದಿರಿ.