ETV Bharat / sitara

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಕೊರೊನಾ ಸೋಂಕು - ಅರ್ಜುನ್ ಜನ್ಯ ಕೊರೊನಾ ಸೋಂಕು

ಸಂಗೀತ ನಿರ್ದೇಶಕ ಅರ್ಜುನ್​ ಜನ್ಯಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Corona Positive to Music Director Arjun Janya
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ
author img

By

Published : Apr 9, 2021, 12:18 PM IST

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಕೋವಿಡ್‌ ಸೋಂಕು ತಗುಲಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಕಿರುತೆರೆ ರಿಯಾಲಿಟಿ ಶೋ ಹಾಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅರ್ಜುನ್ ಜನ್ಯಗೆ, ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು, ತಪಾಸಣೆ ಮಾಡಿಸಿದಾಗ ವರದಿ ಪಾಸಿಟಿವ್ ಬಂದಿದೆ. ಹಾಗಾಗಿ, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ಚೇತರಿಸಿಕೊಂಡು, ವೈದ್ಯರ ಸಲಹೆ ಮೇರೆಗೆ ಮತ್ತೆ ಕೆಲಸಕ್ಕೆ ಮರಳುತ್ತೇನೆ ಎಂದು ಅರ್ಜುನ್ ಜನ್ಯ ತಿಳಿಸಿದ್ದಾರೆ.

ಕಳೆದ ವರ್ಷ ಅರ್ಜುನ್ ಜನ್ಯ ಅವರಿಗೆ ಲಘು ಹೃದಯಾಘಾತ ಸಂಭವಿಸಿದ್ದು, ಮೈಸೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿರಿಸಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಈ ಸುದ್ದಿ ಅವರ ಅಭಿಮಾನಿಗಳು, ಆಪ್ತರು ಮತ್ತು ಕುಟುಂಬದವರಿಗೆ ಶಾಕ್ ನೀಡಿತ್ತು. ಬಳಿಕ ಚೇತರಿಸಿಕೊಂಡ ಅವರು ಕೆಲಸಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ: ಕಾರು ಕೊಡಿಸೋದಾಗಿ ಕೋಟ್ಯಂತರ ವಂಚನೆ, ಮದುವೆ ನೆಪದಲ್ಲಿ ಮೂವರಿಗೆ ಮೋಸ: ನಕಲಿ ಸೇನಾಧಿಕಾರಿಯ ಅಸಲಿ ರೂಪ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.