ETV Bharat / sitara

ಮೈಸೂರಿಗಿಲ್ಲ ಫಿಲ್ಮ್ ಸಿಟಿ ಭಾಗ್ಯ... ಹಾಗಿದ್ರೆ ಯಾವ ನಗರದಲ್ಲಿ ನಿರ್ಮಾಣ.?

author img

By

Published : Nov 18, 2019, 6:12 AM IST

ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕು ಎಂಬುದು ಇಲ್ಲಿನವರ ಬಹುದಿನಗಳ ಬೇಡಿಕೆ. ಆದರೆ, ಉಪಮುಖ್ಯಮಂತ್ರಿ ಡಾ.ಸಿ.ಎನ್​​.ಅಶ್ವತ್ಥ್​​ನಾರಾಯಣ ಅವರು, ಬೆಂಗಳೂರಿನಲ್ಲೇ ಫಿಲ್ಮ್​​ ಸಿಟಿ ನಿರ್ಮಿಸುವುದಾಗಿ ಹೇಳಿದ್ದಾರೆ.

ಡಿಸಿಎಂ ಅಶ್ವತ್ಥ್​​ನಾರಾಯಣ ಘೋಷಣೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಫಿಲ್ಮ್​​ ಸಿಟಿ ನಿರ್ಮಿಸುವುದಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್​​. ಅಶ್ವತ್ಥ್​​ನಾರಾಯಣ ಹೇಳಿದ್ದಾರೆ.

ಭಾರತೀಯ ವಿದ್ಯಾಭವನದಲ್ಲಿ ಡಾ.ಬಿ. ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಎಷ್ಟೋ ಸರ್ಕಾರಗಳು ಫಿಲ್ಮ್​​ ಸಿಟಿ ನಿರ್ಮಿಸುತ್ತೇವೆ ಎಂದು ಹೇಳಿವೆ. ಆದರೆ, ಅದು ಇದುವರೆಗೂ ಕಾರ್ಯ ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಫಿಲ್ಮ್​ ಸಿಟಿ ನಿರ್ಮಾಣಕ್ಕೆ ಬದ್ಧವಾಗಿರಲಿದೆ. ಆದರೆ, ಅದನ್ನು ಬೆಂಗಳೂರಿನಲ್ಲಿ ನಿರ್ಮಿಸಲಿದೆ ಎಂದರು.

ಡಾ.ಬಿ. ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಸುಮಲತಾ, ಡಿಸಿಎಂ ಡಾ.ಸಿ.ಎನ್​​.ಅಶ್ವತ್ಥ್​​ನಾರಾಯಣ

ಮುಖ್ಯಮಂತ್ರಿ ಬಿ.ಎಸ್​​. ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದ ದಿನವೇ ಈ ಜವಾಬ್ದಾರಿ ನನಗೆ ವಹಿಸಿದ್ದಾರೆ. ಅಲ್ಲದೆ, ಇದಕ್ಕಾಗಿ ಬೆಂಗಳೂರಿನಲ್ಲಿ ಜಾಗ ಕೂಡ ಗುರುತಿಸಿದ್ದೆವು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಆದಷ್ಟು ಬೇಗ ಪೂರಕವಾದ ಸ್ಥಳವನ್ನು ಗುರುತಿಸಿ ಬೆಂಗಳೂರಿನಲ್ಲೇ ಫಿಲ್ಮ್​​ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಬಿಜೆಪಿ ಸರ್ಕಾರ ಚಿತ್ರರಂಗದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತದೆ. ಅಲ್ಲದೆ, ಈಗಾಗಲೇ ಬೆಂಗಳೂರಿನಲ್ಲಿ ಫಿಲ್ಮ್​​ ಸಿಟಿ ಸ್ಥಾಪಿಸುವುದಕ್ಕೆ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಸಂಸ್ಥೆಗಳೂ ಹೆಜ್ಜೆ ಇಟ್ಟಿವೆ. ಅವರಿಗೆ ಸ್ಥಳವನ್ನು ನಿಗದಿಪಡಿಸುವುದಷ್ಟೇ ಬಾಕಿ. ಆದಷ್ಟು ಬೇಗ ಪೂರ್ಣಗೊಳಿಸುತ್ತೇವೆ ಎಂದು ಹೇಳಿದರು.

Intro:ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣಮಾಡ್ತೆವೆ ಎಂದು ಹೇಳಿದ ಡಿಸಿಎಮ್ ಅಶ್ವಥ್ ನಾರಾಯಣ್.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಚಿತ್ರರಂಗಕ್ಕೆ ಸಹಾಯಕವಾಗುವಂತಹ ಫಿಲಂ ಸಿಟಿಯನ್ನು ನಿರ್ಮಾಣ ಮಾಡುವುದಾಗಿ ಉಪಮುಖ್ಯಮಂತ್ರಿ ಡಾ, ಅಶ್ವತ್ ನಾರಾಯಣ್ ಹೇಳಿದ್ದಾರೆ. ಇದು ಭಾರತೀಯ ವಿದ್ಯಾಭವನದಲ್ಲಿ ಡಾಕ್ಟರ್ ಬಿ ಸರೋಜದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ತುಂಬಾ ವರ್ಷಗಳಿಂದ ಹಲವು ಸರ್ಕಾರಗಳು ಫಿಲಂ ಸಿಟಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿಕೊಂಡು ಬಂದಿವೆ. ಆದರೆ ಅದು ಸಾಧ್ಯವಾಗಿಲ್ಲ, ಆದರೆ ನಮ್ಮ ಸರ್ಕಾರವು ಫಿಲಂ ಸಿಟಿ ನಿರ್ಮಾಣಕ್ಕೆ ಬದ್ಧವಾಗಿದ್ದು, ಬೆಂಗಳೂರಿನಲ್ಲಿ ಫಿಲಂಸಿಟಿನಿರ್ಮಾಣಮಾಡುವುದಾಗಿಉಪಮುಖ್ಯಮಂತ್ರಿಗಳುಕಾರ್ಯಕ್ರಮದ ವೇದಿಕೆಯಲ್ಲಿ ಘೋಷಿಸಿದರು. ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ದಿನವೇ ಈ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆಅಲ್ಲದೆ ಇದಕ್ಕಾಗಿ ಬೆಂಗಳೂರಿನಲ್ಲಿ ಕೆಲವೊಂದು ಜಾಗವನ್ನು ಗುರುತಿಸಿದ್ದೆವು. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ,Body:ಆದಷ್ಟು ಬೇಗ ಫಿಲಂಸಿಟಿ ಪೂರಕವಾದ ಸ್ಥಳವನ್ನು ನಿಗದಿ ಮಾಡಿ ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುತ್ತೇವೆ. ಇದು ಈ ವಿಷಯವನ್ನು ಹೇಳಲು ಈವೇದಿಕೆಸೂಕ್ತವಾದ
ವೇದಿಕೆ ಎಂದು ನನಗೆ ಅನಿಸಿತು ಅದಕ್ಕಾಗಿ ನಾನು ಈ ವೇದಿಕೆಯಲ್ಲಿ ಫಿಲಂ ಸಿಟಿ ನಿರ್ಮಾಣದ ಭರವಸೆಯನ್ನು ನೀಡುತ್ತಿದ್ದೇನೆ. ನಮ್ಮ ಸರ್ಕಾರ ಚಿತ್ರರಂಗದ ಅಭಿವೃದ್ಧಿಗೆ
ಸಂಪೂರ್ಣ ಸಹಕಾರ ನೀಡುತ್ತದೆ. ಅಲ್ಲದೆ ಈಗಾಗಲೇ ಬೆಂಗಳೂರಿನಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡುವುದಕ್ಕೆ ಅಂತರಾಷ್ಟ್ರೀಯ ಮಟ್ಟದ ಸಹ ಕಷ್ಟ ದೊಡ್ಡ ದೊಡ್ಡ ಸಂಸ್ಥೆಗಳು ಮುಂದೆ ಬಂದಿವೆ. ನಾವು ಅವರಿಗೆ ಸೂಕ್ತವಾದ ಸ್ಥಳವನ್ನು ನಿಗದಿ ಮಾಡಬೇಕಿರುವುದು ಅಷ್ಟೆ ಬಾಕಿ, ಆದಷ್ಟು ಬೇಗ ಆ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಾಕ್ಟರ್ ಅಶ್ವತ್ ನಾರಾಯಣ್ ಹೇಳಿದರು.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.