ETV Bharat / sitara

'ಯುವರತ್ನ'ನ ಅಡ್ಡಾದಲ್ಲಿ ಕಾನ್ಸ್​​​​ಟೇಬಲ್​​​ ಸರೋಜ: ಭಾರೀ ಕುತೂಹಲ ಮೂಡಿಸಿದ ಫೋಟೋ

author img

By

Published : Jun 12, 2019, 8:14 PM IST

ಕೆಲವು ದಿನಗಳ ಹಿಂದೆ ಚಿತ್ರವೊಂದರ ಶೂಟಿಂಗ್ ವೇಳೆ ವಿಚಿತ್ರವಾಗಿ ವರ್ತಿಸಿ ಸುದ್ದಿ ಮಾಡಿದ್ದ ನಟಿ ತ್ರಿವೇಣಿ ಇದೀಗ ಪುನೀತ್ ರಾಜ್​ಕುಮಾರ್ ಅಭಿನಯದ 'ಯುವರತ್ನ' ಸಿನಿಮಾ ಅಡ್ಡಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

'ಯುವರತ್ನ'

'ಟಗರು' ಸಿನಿಮಾದಲ್ಲಿ ಕಾನ್ಸ್​​​​​ಟೇಬಲ್​ ಸರೋಜ ಪಾತ್ರ ಮಾಡಿದ್ದ ತ್ರಿವೇಣಿ ಇತ್ತೀಚೆಗೆ ಸ್ಯಾಂಡಲ್​ವುಡ್​​​​​ನಲ್ಲಿ ಹೆಚ್ಚು ಸುದ್ದಿಯಾಗುತ್ತಿರುವ ನಟಿ. ದುನಿಯಾ ಸೂರಿ ನಿರ್ದೇಶನದ, 'ಟಗರು' ಮೂಲಕ ಖ್ಯಾತಿ ಗಳಿಸಿದ ನಟಿ ತ್ರಿವೇಣಿ ಒಂದಾದ ಮೇಲೊಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

yuvaratna
ಪುನೀತ್ ರಾಜ್​ಕುಮಾರ್, ತ್ರಿವೇಣಿ

ಇತ್ತೀಚೆಗೆ ತ್ರಿವೇಣಿ 'ಯುವರತ್ನ' ಚಿತ್ರದ ಅಡ್ಡಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಚಿತ್ರೀಕರಣ ವೇಳೆ ವಿಚಿತ್ರವಾಗಿ ವರ್ತಿಸಿ ಸುದ್ದಿ ಮಾಡಿದ್ದ ತ್ರಿವೇಣಿ ಈಗ ಇದ್ದಕ್ಕಿದ್ದಂತೆ ಪುನೀತ್​​ ರಾಜ್​​​​​​ಕುಮಾರ್ ಜೊತೆ ಕಾಣಿಸಿಕೊಂಡಿದಲ್ಲದೆ, ಪವರ್ ಸ್ಟಾರ್ ಹೆಗಲ‌ ಮೇಲೆ‌ ಕೈ ಹಾಕಿ ಫೋಟೋ ಕೂಡಾ ತೆಗೆಸಿಕೊಂಡಿದ್ದಾರೆ. ತ್ರಿವೇಣಿ 'ಯುವರತ್ನ' ಚಿತ್ರದಲ್ಲಿ ಕೂಡಾ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಚಿತ್ರದಲ್ಲಿ ಯಾವ ಪಾತ್ರ ಅನ್ನೋದು ಇನ್ನೂ ತಿಳಿದುಬಂದಿಲ್ಲ.

ಇನ್ನೊಂದು ಕಡೆ ಡಾಲಿ ಧನಂಜಯ್ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಹಾಗಾಗಿ ಈ ಚಿತ್ರದಲ್ಲೂ ಡಾಲಿಗೆ ಸರೋಜ ಜೋಡಿ ಆಗ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯಕ್ಕೆ 'ಯುವರತ್ನ' ಚಿತ್ರತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಚಿತ್ರದ ಪ್ರಮುಖ ಭಾಗವನ್ನು ಮೈಸೂರಿನ ಕೆಲವು ಸುಂದರ ತಾಣಗಳಲ್ಲಿ‌ ನಿರ್ದೇಶಕ ಸಂತೋಷ್ ಆನಂದ್​​​​​​​​​​​​​​​​​​ರಾಮ್ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಇನ್ನು ಪವರ್ ಸ್ಟಾರ್ ಜೊತೆ ಸಯೇಶಾ ಸೈಗಲ್ ಡ್ಯೂಯೇಟ್ ಹಾಡುತ್ತಿದ್ದಾರೆ. ಕೆಜಿಎಫ್ ನಿರ್ಮಿಸಿದ್ದ ಹೊಂಬಾಳೆ ಫಿಲಮ್ಸ್ ಸಂಸ್ಥೆ ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಿಸುತ್ತಿದೆ.

Intro:ಪವರ್ ಸ್ಟಾರ್ ಹೆಗಲ‌ ಮೇಲೆ‌ ಕೈ ಹಾಕಿದ ಕಾನ್ ಸ್ಟೇಬಲ್ ಸರೋಜ!!

ಕಾನ್ ಸ್ಟೇಬಲ್ ಸರೋಜ..ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಟಾಕ್ ಆಗುತ್ತಿರುವ ನಟಿ..ದುನಿಯಾ ಸೂರಿ ನಿರ್ದೇಶನದ, ಟಗರು ಚಿತ್ರದ ಮೂಲಕ, ಕಾನ್ ಸ್ಟೇಬರ್ ಸರೋಜ ಆಗಿ ಖ್ಯಾತಿಗಳಿಸಿದ ನಟಿ ತ್ರಿವೇಣಿ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ..ದುನಿಯಾ ಸೂರಿ ಸಲಗ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ತ್ರಿವೇಣಿ, ಈಗ ಯುವರತ್ನ ಚಿತ್ರದ ಅಡ್ಡಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ..ಹೌದು ಕೆಲ ದಿನಗಳ ಹಿಂದೆ ಚಿತ್ರೀಕರಣ ವೇಳೆ, ಮೈ ಮೇಲೆ ದೆವ್ವ ಬಂದವರಹಾಗೆ ಆಡಿ ಸುದ್ದಿ ಮಾಡಿದ್ದ ಸರೋಜ, ಈಗ ದಿಢೀರನೆ ಪುನೀತ್ ರಾಜ್ ಕುಮಾರ್ ಜೊತೆ ಕಾಣಿಸಿಕೊಂಡಿದಲ್ಲದೆ, ಪವರ್ ಸ್ಟಾರ್ ಹೆಗಲ‌ಮೇಲೆ‌ ಕೈ ಹಾಕಿ ಫೋಟೋ ಕೂಡ ತೆಗೆದುಕೊಂಡಿದ್ದಾರೆ...ಯಸ್ ಪವರ್ ಸ್ಟಾರ್ ಜೊತೆ ನಿಂತು ಫೋಟೋ ತೆಗಿಸಿಕೊಂಡಿರುವ ಸರೋಜ ಯುವರತ್ನ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ...ಭಟ್ ಯುವರತ್ನ' ಚಿತ್ರದಲ್ಲಿ ಯಾವ ಪಾತ್ರ ಅನ್ನೋದು ಎಕ್ಸೈಟ್ ಆಗಿದ್ದಾರಂತೆ..ಇನ್ನೊಂದು ಕಡೆ ಪುನೀತ್ ಡಾಲಿ ಧನಂಜಯ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ..
ಹಾಗಾಗಿ ಈ ಚಿತ್ರದಲ್ಲೂ ಡಾಲಿಗೆ, ಸರೋಜ ಜೋಡಿ ಆಗ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ..Body:ಸದ್ಯ ಯುವರತ್ನ ಚಿತ್ರತಂಡ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಚಿತ್ರದ ಪ್ರಮುಖ ಭಾಗದ ಚಿತ್ರೀಕರಣ ಮೈಸೂರಿನ ಕೆಲವು ಸುಂದರ ತಾಣಗಳಲ್ಲಿ‌ ನಿರ್ದೇಶಕ ಸಂತೋಷ್ ಆನಂದ್ ರಾಮ್ ಚಿತ್ರೀಸಿಕೊಳ್ಳುತ್ತಿದ್ದಾರೆ.ಇನ್ನು ಪವರ್ ಸ್ಟಾರ್ ಜೊತೆ ಸೌತ್ ಸುಂದರಿ ಸಯೇಶಾ ಸೈಗಲ್ ಜೋಡಿಯಾಗಿದ್ದಾರೆ..ಹೊಂಬಾಳೆ ಫಿಲ್ಮ್ ಅದ್ದೂರಿಯಾಗಿ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದೆ.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.