ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಕಳೆದ ಕೆಲವು ದಿನಗಳಿಂದ ಪುನೀತ್ ರಾಜಕುಮಾರ್ ಅಭಿನಯದ ಯುವರತ್ನ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು ಇಂದು ಕಾಲೇಜಿನಲ್ಲಿ ಶೂಟಿಂಗ್ ಸೆಟ್ ಹಾಕುವಾಗ ಅದನ್ನು ನೋಡಲು ಬಂದ ವಿದ್ಯಾರ್ಥಿಗಳನ್ನು ಬೌನ್ಸರ್ಗಳು ತಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನೂಕುನುಗ್ಗಲೂ ಉಂಟಾಯಿತು.
ಬೌನ್ಸರ್ ಗಳ ವರ್ತನೆಯಿಂದ ಕೋಪಗೊಂಡ ವಿದ್ಯಾರ್ಥಿಗಳು ಮಹಾರಾಜ ಕಾಲೇಜು ಮೈದಾನದ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಪೋಲಿಸರು ವಿದ್ಯಾರ್ಥಿಗಳನ್ನು ಮನವೊಲಿಸಿ ವಿದ್ಯಾರ್ಥಿಗಳನ್ನು ಶಾಂತರಾಗಿದ್ದಾರೆ.
ಚಿತ್ರ ತಂಡದ ಸ್ಪಷ್ಟನೆ: ಮಹಾರಾಜ ಕಾಲೇಜಿನಲ್ಲಿ ರಾಜರತ್ನ ಚಿತ್ರೀಕರಣ ನಡೆಸಲು ವಿಶ್ವವಿದ್ಯಾನಿಲಯದಿಂದ ಅನುಮತಿ ಪಡೆಯಲಾಗಿತ್ತು, ಅದರಂತೆ ಕಳೆದ ಶನಿವಾರ ಮತ್ತು ಭಾನುವಾರ ಚಿತ್ರೀಕರಣ ನಡೆಸಿದ್ದು ಮಂಗಳವಾರ ರಜೆಯಾದ್ದರಿಂದ ಅಂದೂ ಕೂಡ ಚಿತ್ರೀಕರಣಕ್ಕೆ ಅನುಮತಿ ಪಡೆಯಲಾಗಿತ್ತು. ಆದರೆ ನಾಳಿನ ಚಿತ್ರಿಕರಣಕ್ಕೆ ಸೆಟ್ ಹಾಕುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಚಿತ್ರ ತಂಡದ ಮೂಲಗಳು ಸ್ಪಷ್ಟನೆ ನೀಡಿದೆ.