ಆ ದಿನಗಳು ಖ್ಯಾತಿಯ ನಟ ಚೇತನ್ ಸಿನಿಮಾ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಬ್ಯುಸಿ ಇದ್ರು. ಇದೇ ಗ್ಯಾಪ್ನಲ್ಲಿ ಲವ್ನಲ್ಲಿ ಬಿದ್ದು ಈಗ ತನ್ನ ಪ್ರೇಯಸಿ ಜೊತೆ ಸಪ್ತಪದಿ ತುಳಿಕಯೋಕೆ ರೆಡಿಯಾಗಿದ್ದಾರೆ. ಫೆಬ್ರವರಿ 2ರಂದು ತನ್ನ ಮನದರಸಿ ಮೇಘಾ ಜೊತೆ ಹಸೆಮಣೆ ಏರಲು ಸಜ್ಜಾಗಿರುವ ಚೇತನ್ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.
ನಿಜ ಜೀವನದಲ್ಲಿ ಚೇತನ್ ತುಂಬಾ ಸರಳ ಜೀವಿ. ಇನ್ನು ಈ ಸಿಂಪಲ್ ಮ್ಯಾನ್ ಮ್ಯಾರೇಜ್ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದ್ದು, ಚೇತನ್ ತುಂಬಾ ಸಿಂಪಲ್ ಆಗಿ ಮದುವೆಯಾಗಲು ನಿರ್ಧರಿಸಿದ್ದಾರೆ.
ಶೇಷಾದ್ರಿಪುರಂನಲ್ಲಿರುವ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಮದುವೆಯಾಗಲು ಚೇತನ್ ನಿರ್ಧರಿಸಿದ್ದಾರೆ. ಈ ಮದುವೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ವಿಚಾರ ಅಂದ್ರೆ ಚೇತನ್ ವೆಡ್ಡಿಂಗ್ ಇನ್ವಿಟೇಷನ್ಗಳು. ಹೌದು ನಟರ ಮದುವೆ ಅಂದ ಮೇಲೆ ಅವರ ಮದುವೆ ಕಾರ್ಡ್ಗಳು ಕೂಡ ತುಂಬಾ ಅದ್ದೂರಿಯಾಗಿರುತ್ತವೆ. ಆದರೆ, ಚೇತನ್ ಅವರ ಮದುವೆಯ ಆಹ್ವಾನ ಪತ್ರಿಕೆ ತುಂಬಾ ವಿಶೇಷವಾಗಿದೆ.
ಸಾವಿರಾರು ರೂಪಾಯಿ ಖರ್ಚು ಮಾಡಿ ವೆಡ್ಡಿಂಗ್ ಕಾರ್ಡ್ ರೆಡಿ ಮಾಡಿಸುವ ನಟರ ಮಧ್ಯೆ ಈಗ ಚೇತನ್ ಸಿಂಪಲ್ಲಾಗಿ ಮಾಡಿಸಿದ್ದಾರೆ.
ಸೀಡ್ ಪೇಪರ್ನಲ್ಲಿ ಲಗ್ನಪತ್ರಿಕೆ:
ಚೇತನ್ ಮದುವೆ ಆಮಂತ್ರಣ ಪತ್ರಿಕೆಯನ್ನು ಸೀಡ್ ಸೀಡ್ ಬಾಲ್ ಇದ್ದು, ಆಮಂತ್ರಣ ಪತ್ರಿಕೆಯನ್ನು ನೆಲಕ್ಕೆ ಎಸೆದರೆ ಅದು ಚಿಗುರೊಡೆದು ಗಿಡವಾಗಿ ಬೆಳೆಯಲಿದೆ. ಹೋರಾಟದ ಜೊತೆ ಪರಿಸರದ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಚೇತನ್, ಮದುವೆ ಆಮಂತ್ರಣ ಪತ್ರಿಕೆಯಲ್ಲಿಯೂ ಪರಿಸರ ಕಾಳಜಿ ಮೆರೆದಿದ್ದಾರೆ.