ನಟನೆ ಹಾಗೂ ಸಾಮಾಜಿಕ ಹೋರಾಟದ ಮೂಲಕ ಗುರುತಿಸಿಕೊಂಡಿರುವ 'ಆ ದಿನಗಳು' ಚೇತನ್ ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ. ತಮ್ಮ ಬಹುಕಾಲದ ಗೆಳತಿ ಮೇಘ ಜೊತೆ ಸಪ್ತಪದಿ ತುಳಿಯೋಕೆ ರೆಡಿಯಾಗಿರುವ ಚೇತನ್, ಇಂದು ಕಲರ್ಫುಲ್ ಆಗಿ ತಮ್ಮ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ವಿಶೇಷವೆಂದರೆ ಚೇತನ್ ಅವರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಯಾವುದೋ ಸ್ಟಾರ್ ಹೋಟೆಲ್ ಅಥವಾ ಕಲರ್ಫುಲ್ ಲೊಕೇಶನ್ನಲ್ಲಿ ಮಾಡಿಸಿಕೊಂಡಿಲ್ಲ. ಬದಲಿಗೆ ಶೇಷಾದ್ರಿಪುರಂನಲ್ಲಿರುವ ವಿನೋಬ ಭಾವೆ ಅನಾಥಶ್ರಮದ ಮಕ್ಕಳ ಜೊತೆ ಫೋಟೋಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ.
ಅನಾಥ ಮಕ್ಕಳ ಜೊತೆ ಮಕ್ಕಳಾಗಿ ಚೇತನ್ ಹಾಗೂ ಮೇಘ ಗೋಡೆಗಳಿಗೆ ಬಣ್ಣ ಬಳಿದು, ಬುಗುರಿ ಆಡುವ ಮೂಲಕ ಸಖತ್ ಕಲರ್ಫುಲ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನು ಚೇತನ್-ಮೇಘ ವಿವಾಹ ಫೆಬ್ರವರಿ 2ರಂದು ಇದೇ ವಿನೋಬ ಭಾವೆ ಆಶ್ರಮದಲ್ಲಿ ಸರಳವಾಗಿ ನಡೆಯಲಿದೆ.