ETV Bharat / sitara

ಜೂಜು ದಂಧೆ: ನಟಿ ನೇಹಾಶೆಟ್ಟಿ ತಂದೆ ಸೇರಿ 42 ಮಂದಿ ವಿರುದ್ಧ ಕೋರ್ಟ್​ಗೆ ಚಾರ್ಜ್ ಶೀಟ್ ಸಲ್ಲಿಕೆ

ಹೊರ ರಾಜ್ಯಗಳಿಂದ ದಂಧೆಕೋರರನ್ನು ಕರೆಸುತ್ತಿದ್ದರು ಎನ್ನಲಾದ ಹರಿರಾಜ್ ಶೆಟ್ಟಿ ಬೆಂಗಳೂರಿನ‌ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಸೇರಿದಂತೆ ಐವರು ಮಹಿಳೆಯರು ಅಂದರ್ ಬಾಹರ್​ನಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ‌.

court
ನ್ಯಾಯಾಲಯ
author img

By

Published : Aug 2, 2021, 6:30 PM IST

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಕ್ಲಬ್​ವೊಂದರಲ್ಲಿ ಅಂದರ್ ಬಾಹರ್ ಆಡಿಸುತ್ತಿದ್ದ ಆರೋಪದ ಮೇರೆಗೆ ಉದ್ಯಮಿ ಹಾಗೂ ನಟಿಯ ತಂದೆ ಹರಿರಾಜ್ ಶೆಟ್ಟಿ ಸೇರಿದಂತೆ 42 ಮಂದಿ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ನಟ ಗಣೇಶ್ ಅಭಿನಯದ ಮುಂಗಾರು ಮಳೆ- 2 ಚಿತ್ರದಲ್ಲಿ ನಟಿಸಿದ್ದ ನಟಿ ನೇಹಾ ಶೆಟ್ಟಿಯ ತಂದೆ ಹರಿರಾಜ್ ರಾಜ್ ಶೆಟ್ಟಿ ಹಾಗೂ ಆತನ ಗ್ಯಾಂಬ್ಲಿಂಗ್​ ಗ್ಯಾಂಗ್ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 250 ಪುಟಗಳಿರುವ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ‌.

ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಇದೇ ವರ್ಷ ಮಾ.13 ರಂದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಬ್ಯಾನ್ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಈತನೊಂದಿಗೆ ಐವರು ಮಹಿಳೆಯರು ಸೇರಿದಂತೆ 42 ಮಂದಿ‌ ಜೂಜಿನಲ್ಲಿ ತೊಡಗಿಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ಇನ್ಸ್​ಪೆಕ್ಟರ್​ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ 1 ಲಕ್ಷಕ್ಕಿಂತ ಹೆಚ್ಚು ಹಣ ಜಪ್ತಿ ಮಾಡಿಕೊಂಡಿದ್ದರು.

ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಆಂಧ್ರಪ್ರದೇಶ & ತಮಿಳುನಾಡು ರಾಜ್ಯಗಳಿಂದ ಜೂಜುಕೋರರ ಲಕ್ಷ ಲಕ್ಷ ಹಣ ತಂದು ಜೂಜು ಆಡಿಸುತ್ತಿರುವುದು ಬೆಳಕಿಗೆ ಬಂದಿತ್ತು.

ಸರ್ಕಾರಿ ಅಧಿಕಾರಿಗಳ ಪತ್ನಿಯರು ಜೂಜಿನಲ್ಲಿ ಭಾಗಿ

ಹೊರ ರಾಜ್ಯಗಳಿಂದ ದಂಧೆಕೋರರನ್ನು ಕರೆಸುತ್ತಿದ್ದರೆನ್ನಲಾದ ಹರಿರಾಜ್ ಶೆಟ್ಟಿ ಬೆಂಗಳೂರಿನ‌ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಸೇರಿದಂತೆ ಐವರು ಮಹಿಳೆಯರು ಅಂದರ್ ಬಾಹರ್ ಭಾಗಿಯಾಗಿರುವುದು ಗೊತ್ತಾಗಿದೆ‌. ಸದ್ಯ ಪುರುಷರ ಜೊತೆ 5 ಮಹಿಳೆಯರ ವಿರುದ್ಧ ಮಂಜುಳ, ಸ್ವಾತಿ, ಲಕ್ಷ್ಮಿ, ಗೀತಾದೇವಿ ಹಾಗೂ ಕ್ರಿಸ್ಟೀನ್ ಕುಮಾರಿ ಎಂಬುವರ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ಓದಿ: 'ಬ್ಯಾಂಗ್' ಸಿನಿಮಾ‌ ಶೂಟಿಂಗ್​ ವೇಳೆ ಅವಘಡ: ನಟಿ ಶಾನ್ವಿ ಕಾಲಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.