ಕನ್ನಡದ ಜನಪ್ರಿಯ ಱಪರ್ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ನ ಬಾರ್ಬಿ ಡಾಲ್ ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ತಮ್ಮ ಮದುವೆಯ ಸವಿನೆನಪಿಗಾಗಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ 'ಗೆಟ್ ಹೈ' ಎನ್ನುವ ಮ್ಯೂಸಿಕ್ ವಿಡಿಯೋವನ್ನು ತಯಾರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿ ಚಂದನ್ ಮತ್ತು ನಿವೇದಿತಾ ಗೌಡ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
- " class="align-text-top noRightClick twitterSection" data="">
ಬಣ್ಣಿಸಲು ಪದಗಳೇ ಸಿಗುತ್ತಿಲ್ಲ ಎಂಬ ಸುಂದರವಾದ ಸಾಲಿನ ಮೂಲಕ ಆರಂಭವಾಗುವ ಈ ಹಾಡಿನ ಸಾಹಿತ್ಯವನ್ನು ಸ್ವತಃ ಚಂದನ್ ಅವರೇ ಬರೆದಿದ್ದಾರೆ. ಮಾತ್ರವಲ್ಲ, ಅವರೇ ಹಾಡಿನ ದನಿಯಾಗಿದ್ದಾರೆ. ಇದರ ಜೊತೆಗೆ ನಿವೇದಿತಾ ಗೌಡ ಕೂಡಾ ಗೆಟ್ ಹೈನಲ್ಲಿ ಹಾಡಿರುವುದು ವಿಶೇಷ.