ಮಾರ್ಚ್ 1 ರಂದು ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕಾ ಮಂದಣ್ಣ ಅಭಿಯದ ‘ಯಜಮಾನ‘ ಸಿನಿಮಾ 50 ದಿನಗಳನ್ನು ಪೂರೈಸಿದ್ದು, ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ.
ಇನ್ನು ಕೆಲವೇ ದಿನಗಳಲ್ಲಿ ಅಮೇಜಾನ್ ಪ್ರೈಮ್ ಡಿಜಿಟಲ್ ವೇದಿಕೆಯಲ್ಲಿ ಕೂಡಾ ‘ಯಜಮಾನ‘ ಪ್ರದರ್ಶನವಾಗಲಿದೆ. ಚಿತ್ರದ ನಿರ್ಮಾಪಕರಾದ ಶೈಲಜಾ ನಾಗ್ ಹಾಗೂ ಬಿ. ಸುರೇಶ್ ದುಪ್ಟಟ್ಟು ಸಂಭ್ರಮದಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ ಅಮೇಜಾನ್ ಪ್ರೈಮ್ ವಿಡಿಯೋ ‘ಯಜಮಾನ’ ಡಿಜಿಟಲ್ ಹಕ್ಕನ್ನು 3.75 ಕೋಟಿ ರೂಪಾಯಿಗೆ ಖರೀದಿಸಿದೆ ಎನ್ನಲಾಗಿದೆ.
ಈ ಸಿನಿಮಾ ದರ್ಶನ್ ವೃತ್ತಿ ಜೀವನದ 49ನೇ ಸಿನಿಮಾ. ಬೆಂಗಳೂರಿನ ಸ್ವಪ್ನ ಥಿಯೇಟರ್, ಕೆಲವು ಮಾಲ್ಗಳು ಹಾಗೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ‘ಯಜಮಾನ‘ ಪ್ರದರ್ಶನ ಆಗುತ್ತಿದೆ. ಸಿನಿಮಾದ ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಹರಿಕೃಷ್ಣ ಹಾಗೂ ಪಿ. ಕುಮಾರ್ ಜೊತೆ ಸೇರಿ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ರಶ್ಮಿಕಾ ಮಂದಣ್ಣ, ತಾನ್ಯ ಹೋಪ್, ದೇವರಾಜ್, ದತ್ತಣ್ಣ, ಅನುಪ್ ಸಿಂಗ್ ಠಾಕೂರ್, ಮಂಡ್ಯ ರಮೇಶ್, ಶಿವರಾಜ್ ಕೆ.ಆರ್.ಪೇಟೆ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.