ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಅದಿತಿ ಪ್ರಭುದೇವ ನಟಿಸಿರುವ 'ಸಿಂಗ' ಸಿನಿಮಾದ 'ಶಾನೆ ಟಾಪಾಗೌಳೆ' ಹಾಡನ್ನು ಯೂಟ್ಯೂಬ್ನಲ್ಲಿ ಬರೋಬ್ಬರಿ 7 ಮಿಲಿಯನ್ ಜನರು ನೋಡುವ ಮೂಲಕ ಹೊಸ ದಾಖಲೆ ಬರೆದಿದೆ.
ವಿಶೇಷ ಎಂದರೆ ಈ ಹಾಡಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಕ್ಲೀನ್ ಬೌಲ್ಡ್ ಆಗಿದ್ರಂತೆ. ಇದೀಗ ಚಿತ್ರತಂಡ ಮತ್ತೊಂದು ಸುಂದರವಾದ ಹಾಡನ್ನು ಬಿಡುಗಡೆ ಮಾಡಿದೆ. ಚಿತ್ರತಂಡ ನಿನ್ನೆ ಏರ್ಪಡಿಸಿದ್ದ ಸಿನಿಮಾ ಹಾಡುಗಳ ಸಕ್ಸಸ್ ಪ್ರೆಸ್ಮೀಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ವಾಟ್ ಎ ಬ್ಯೂಟಿಫುಲ್ ಹುಡುಗಿ' ವಿಡಿಯೋ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಹಿಂದೆ ಚಿತ್ರದ ಟೀಸರನ್ನು ಕೂಡಾ ದರ್ಶನ್ ಅವರೇ ಬಿಡುಗಡೆ ಮಾಡಿದ್ದರು. ವಿಶೇಷ ಎಂದರೆ ನವೀನ್ ಸಜ್ಜು ಜೊತೆಗೆ 'ವಾಟ್ ಎ ಬ್ಯೂಟಿಫುಲ್' ಹಾಡನ್ನು ಚಿರಂಜೀವಿ ಪತ್ನಿ ಮೇಘನಾ ರಾಜ್ ಹಾಡಿದ್ದಾರೆ.
'ಸಿಂಗ' ಮಾಸ್ ಅ್ಯಂಡ್ ಕಮರ್ಷಿಯಲ್ ಸಿನಿಮಾ ಆಗಿದ್ದು ವಿಜಯ್ ಕಿರಣ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಉದಯ್ಸಿಂಗ್ ಮೆಹ್ತಾ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಹಾಡುಗಳಿಗೆ ಧರ್ಮವಿಶ್ ಸಂಗೀತ ನೀಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಮತ್ತು ಚೇತನ್ ಸಾಹಿತ್ಯ ರಚಿಸಿದ್ದಾರೆ. ಚಿರಂಜೀವಿ ಸರ್ಜಾ, ಅದಿತಿ ಪ್ರಭುದೇವ, ತಾರಾ, ಶಿವರಾಜ್ ಕೆ.ಆರ್. ಪೇಟೆ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದು ಸಿನಿಮಾ ಜುಲೈ 19 ರಂದು ಬಿಡುಗಡೆಯಾಗುತ್ತಿದೆ.
- " class="align-text-top noRightClick twitterSection" data="">