ಯಾವ ಗಾಡ್ಫಾದರ್ ಇಲ್ಲದೆ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ಕನ್ನಡಿಗರ ಮನಗೆದ್ದು ಲವ್ಲಿಸ್ಟಾರ್ ಎಂಬ ಬಿರುದು ಪಡೆದಿರುವ ನಟ ಪ್ರೇಮ್ ಸಾಕಷ್ಟು ಏಳುಬೀಳುಗಳ ನಡುವೆಯೂ ಸುಮಾರು 24 ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದೀಗ ಪ್ರೇಮ್ ತಮ್ಮ 25ನೇ ಸಿನಿಮಾ ಮಾಡುತ್ತಿದ್ದಾರೆ. ನಿನ್ನೆ ಪ್ರೇಮ್ ಅಭಿನಯಿಸುತ್ತಿರುವ 'ಪ್ರೇಮಂಪೂಜ್ಯಂ' ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ಮುಹೂರ್ತ ಸಮಾರಂಭಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿ ಸ್ನೇಹಿತರ 25ನೇ ಸಿನಿಮಾಗೆ ಕ್ಲಾಪ್ ಮಾಡಿ ಚಿತ್ರಕ್ಕೆ ಶುಭ ಕೋರಿದರು. ದರ್ಶನ್ಗೆ ಪ್ರಜ್ವಲ್ ದೇವರಾಜ್ ಕೂಡಾ ಸಾಥ್ ನೀಡಿದ್ರು. ಪ್ರೇಮ್ ಹಾಗೂ ದರ್ಶನ್ ನಡುವೆ ಬಹಳ ವರ್ಷಗಳಿಂದ ಒಳ್ಳೆಯ ಒಡನಾಟ ಇದೆ. ದರ್ಶನ್ ಅವರ ತೂಗುದೀಪ ಬ್ಯಾನರ್ನ ಮೊದಲ ಸಿನಿಮಾ 'ಜೊತೆ ಜೊತೆಯಲಿ' ಚಿತ್ರಕ್ಕೆ ಪ್ರೇಮ್ ನಾಯಕನಾಗಿದ್ದರು. ಅಲ್ಲದೆ 'ನೆನಪಿರಲಿ' ನಂತರ 'ಜೊತೆಜೊತೆಯಲಿ' ಸಿನಿಮಾ ಪ್ರೇಮ್ ಕೆರಿಯರ್ನ ಸೂಪರ್ ಹಿಟ್ ಸಿನಿಮಾವಾಗಿದೆ.
'ಪ್ರೇಮಂ ಪೂಜ್ಯಂ' ಸಿನಿಮಾದಲ್ಲಿ ಪ್ರೇಮ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಡಾ. ರಾಘವೇಂದ್ರ ಎಂಬುವವರು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಶೇಡ್ನಲ್ಲಿ ಪ್ರೇಮ್ ಕಾಣಿಸಿಕೊಳ್ಳಲಿದ್ದು ಇದು ಪ್ರೇಮ್ ಕೆರಿಯರ್ನ ವಿಶೇಷ ಚಿತ್ರವಾಗಿದೆ. ಇದು ಲವ್ ಕಂ ಕಾಮಿಡಿ ಚಿತ್ರವಾಗಿದ್ದು ಐಂದ್ರಿತಾ ರೇ ಹಾಗೂ ಶನಿ ಧಾರವಾಹಿ ಖ್ಯಾತಿಯ ಬೃಂದಾ ಇಬ್ಬರೂ ನಾಯಕಿಯರಾಗಿ ನಟಿಸುತ್ತಿದ್ದಾರೆ. ಡಾ. ರಕ್ಷಿತ್ ಕದಂಬಾಡಿ ಹಾಗೂ ಡಾ.ರಾಜ್ ಕುಮಾರ್ ಜಾನಕಿರಾಮ್ ಚಿತ್ರವನ್ನು ನಿರ್ಮಿಸುತ್ತಿದ್ದು ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. ನಿರ್ದೇಶಕ, ನಿರ್ಮಾಪಕರು ಮೂವರೂ ವೈದ್ಯರಾಗಿದ್ದು ಈ 'ಪ್ರೇಮಂಪೂಜ್ಯಂ' ಆಪರೇಷನ್ನಲ್ಲಿ ಯಶಸ್ವಿಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.