ಸೂಜಿದಾರ ಸಿನಿಮಾ ಹಾಗೂ ಕನ್ನಡ ಬಿಗ್ ಬಾಸ್ ಸೀಸನ್ 7ರಲ್ಲಿ ಗಮನ ಸೆಳೆದ ನಟಿ ಚೈತ್ರಾ ಕೋಟೂರು. ಬಿಗ್ ಬಾಸ್ ಆದ್ಮಲೇ ಚೈತ್ರಾ ಕೋಟೂರ್ ಒಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅಷ್ಟಕ್ಕೂ ಚೈತ್ರಾ ಕೋಟೂರ್ ಮಾಡಿರುವ ಸಾಹಸ ಏನು ಅಂತೀರಾ..? ಹುಡುಗರು ತುಂಬಾ ಒಳ್ಳೆವ್ರು ಎಂಬ ಆಲ್ಬಂ ಹಾಡನ್ನು ಮಾಡಿದ್ದಾರೆ.
![ಚೈತ್ರಾ ಕೋಟೂರ್](https://etvbharatimages.akamaized.net/etvbharat/prod-images/kn-bng-02-hudugaru-tumba-ollevru-athidhare-bigg-boss-chaithra-video-7204735_04022021141602_0402f_1612428362_907.jpg)
ಹುಡುಗರು ತುಂಬಾ ಒಳ್ಳೆವ್ರು... ಟೈಮ್ ಬೇಕು ಒಂಚೂರು.. ಎಂದು ಈ ಹಾಡು ಶುರುವಾಗುತ್ತದೆ. ಈ ಹಾಡಿನಲ್ಲಿ ರ‍್ಯಾಪ್ ಶೈಲಿಯ ಸಾಲುಗಳನ್ನು ಬಳಸಲಾಗಿದೆ. ಮತ್ತೊಂದು ವಿಶೇಷ ಏನಂದ್ರೆ ಈ ಹಾಡಿನ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಚೈತ್ರಾ, ಈ ಆಲ್ಬಂ ಹಾಡಿನಲ್ಲಿ ನಟಿಸಿ, ನಿರ್ದೇಶನ ಮಾಡಿ, ನಿರ್ಮಾಣವನ್ನೂ ಮಾಡುವುದಲ್ಲದೇ ಇವರೇ ಹಾಡಿದ್ದಾರೆ.
- " class="align-text-top noRightClick twitterSection" data="">
ಒಳ್ಳೇ ಹುಡುಗ್ರ ಬುದ್ಧಿ ನಿಂಗೆ ಗೊತ್ತೇ ಇಲ್ವೇನೇ, ಅನ್ಯಾಯ ಅನ್ನೋ ಮಾತು ಅವ್ರ ಹಿಸ್ಟರಿಲೇ ಇಲ್ವೇ, ತಳುಕು ಬಳುಕು, ಅಂದ ಚೆಂದ ಎಷ್ಟು ನೋಡ್ತಾರೆ ಎಂಬ ಸಾಹಿತ್ಯ ಬರೆದು, ಸಂಗೀತ ನೀಡುವ ಮೂಲಕ, ಈ ಹಾಡಿಗೆ ಮಸ್ತ್ ಸ್ಟೆಪ್ ಹಾಕಿದ್ದಾರೆ.
ಚೈತ್ರಾ ಬರೆದಿರುವ ಸಾಲುಗಳು ಯುವ ಮನಸ್ಸುಗಳಿಗೆ ಇಷ್ಟ ಆಗುತ್ತಿವೆ. ಹುಡುಗರನ್ನು ಗುಣಗಾನ ಮಾಡುವ ಹಾಡು ಇದಾಗಿದೆ. ಅಲ್ಲದೇ ಪ್ರೀತಿ, ಸಂಬಂಧಗಳ ಬಗ್ಗೆ ಹುಡುಗಿಯರಿಗೆ ಬುದ್ಧಿಮಾತು ಹೇಳುವ ಕೆಲಸವನ್ನು ಚೈತ್ರಾ ಮಾಡಿದ್ದಾರೆ.