ಚಾಮರಾಜನಗರ: 'ಏಳು ಮಲೆ ಮೇಲೇರಿ ಬಂದಾನಪ್ಪೋ ಮಾದೇವ' ...ಜೋಗಯ್ಯ ಚಿತ್ರದ ಈ ಹಾಡು ಇಂದಿಗೂ ಎಲ್ಲರ ಮೋಸ್ಟ್ ಫೇವರಿಟ್. ಈ ಹಾಡಿನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಮಲೆ ಮಹದೇಶ್ವರನನ್ನು ಹಾಡಿ ಹೊಗಳಿದ್ದಾರೆ.
ಶೂಟಿಂಗ್ನಲ್ಲಿ ಮಾತ್ರವಲ್ಲದೆ ಪ್ರತಿ ವರ್ಷ ಶಿವರಾಜ್ಕುಮಾರ್ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಚಾಮರಾಜನಗರದ ಹನೂರು ತಾಲೂಕಿನ ಈ ಪವಿತ್ರ ಕ್ಷೇತ್ರಕ್ಕೆ ಇಂದು ಶಿವಣ್ಣ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಶಿವರಾಜ್ಕುಮಾರ್ ಜೊತೆ ನಟ ಚಿ. ಗುರುದತ್, ನಿರ್ದೇಶಕ ರಘುರಾಮ್ ಹಾಗೂ ಇನ್ನಿತರರು ಬಂದು ಮಹದೇಶ್ವರನಿಗೆ ಪೂಜೆ ಸಲ್ಲಿಸಿದ್ದಾರೆ. ಇನ್ನು ದೇವಸ್ಥಾನಕ್ಕೆ ಶಿವರಾಜ್ಕುಮಾರ್ ಬಂದದ್ದೇ ತಡ ಸ್ಥಳದಲ್ಲಿದ್ದ ಭಕ್ತಾದಿಗಳು ಅವರ ಸುತ್ತ ನೆರೆದು ಸೆಲ್ಫಿಗಾಗಿ ಮುಗಿಬಿದ್ದರು. ಶಿವಣ್ಣ ಬಂದಿದ್ದಾರೆ ಎಂಬ ಸುದ್ದಿ ಹರಡಿ ಜನರು ದೇವಸ್ಥಾನದತ್ತ ದೌಡಾಯಿಸುವ ದೃಶ್ಯ ಕಂಡುಬಂತು. ಇನ್ನು ಎಲ್ಲರೊಂದಿಗೆ ನಗುತ್ತಾ ಸೆಲ್ಫಿಗೆ ಪೋಸ್ ಕೊಟ್ಟ ಶಿವಣ್ಣ ನಂತರ ದೇವಸ್ಥಾನದಲ್ಲಿ ಕೆಲಹೊತ್ತು ಕುಳಿತು ಪ್ರಾರ್ಥಿಸಿದರು.