ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದಂತೆ ದೇಶಾದ್ಯಂತ ಚಿತ್ರಮಂದಿರಗಳನ್ನು ಬಂದ್ ಮಾಡಲಾಯ್ತು. ಕಳೆದ 1 ತಿಂಗಳಿಂದ ಚಿತ್ರೀಕರಣ ಚಟುವಟಿಕೆಗಳು ಆರಂಭವಾದರೂ ಚಿತ್ರಮಂದಿರಗಳು ಮಾತ್ರ ತೆರೆದಿರಲಿಲ್ಲ. ಆದರೆ ಇದೀಗ ಸಿನಿಮಾ ಥಿಯೇಟರ್ ರೀ ಓಪನ್ಗೆ ದಿನಾಂಕ ನಿಗದಿಯಾಗಿದೆ.
ಕೊನೆಗೂ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ರಮಂದಿರದ ಮಾಲೀಕರು, ನಿರ್ಮಾಪಕರು , ಸಿನಿ ಕಾರ್ಮಿಕರಿಗೆ ಥಿಯೇಟರ್ ರೀ ಓಪನ್ ಆಗುತ್ತಿರುವುದು ಸಂತೋಷ ತಂದಿದೆ. ಆರು ತಿಂಗಳಿಂದ ಮುಚ್ಚಿರುವ ಥಿಯೇಟರ್ಗಳನ್ನು ಮತ್ತೆ ತೆರೆಯಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಅಕ್ಟೋಬರ್ 1 ರಿಂದ ಚಿತ್ರಮಂದಿರಗಳು ತೆರೆಯುತ್ತವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್. ಜೈರಾಜ್ ಮಾಹಿತಿ ನೀಡಿದ್ದಾರೆ.
ಚಿತ್ರಮಂದಿರಗಳ ರೀ ಓಪನ್ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಸೌತ್ ಇಂಡಿಯಾ ವಾಣಿಜ್ಯ ಮಂಡಳಿ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೂಮ್ ಮೀಟಿಂಗ್ ನಡೆಸಿದ್ದಾರೆ. ಇದರಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈ ರಾಜ್ ಕೂಡಾ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ಅಮಿತ್ ಶಾ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಆಲಿಸಿದ್ಧಾರೆ. ಅಷ್ಟೇ ಅಲ್ಲ, ಅಕ್ಟೋಬರ್ 1 ರಿಂದ ಚಿತ್ರಮಂದಿರಗಳನ್ನು ರೀ ಓಪನ್ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಜೊತೆಗೆ ಸೆಪ್ಟೆಂಬರ್ ಎರಡನೇ ವಾರದಲ್ಲಿ ಗೈಡ್ಲೈನ್ ನೀಡುವುದಾಗಿ ಅಮಿತ್ ಶಾ ಹೇಳಿರುವುದಾಗಿ ಜೈರಾಜ್ ತಿಳಿಸಿದ್ದಾರೆ.