ETV Bharat / sitara

ಅದೃಷ್ಟ ಅಂದ್ರೆ ಇದೇ ಕಣ್ರಿ.. ಈ ಹಿಂದೆ ಬರೀ ಕಾರುಚಾಲಕ, ಈಗ ಸಿನಿಮಾ ನಿರ್ದೇಶಕ! - ಎಪಿ ಅರ್ಜುನ್​ ಕಾರು ಚಾಲಕ

ಎ.ಪಿ ಅರ್ಜುನ್​​ಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಸವ ಅಲಿಯಾಸ್​​ ರಾಮ್​​ ಇದೀಗ ಸಿನಿಮಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ರಣಬೇಟೆಗಾರ ಎಂಬ ಸಿನಿಮಾ ಮಾಡುತ್ತಿದ್ದು, ಸಿನಿಮಾದ ಮುಹೂರ್ತ ನಡೆದಿದೆ.

ಬಸವ ಅಲಿಯಾಸ್​​ ರಾಮ್​​
author img

By

Published : Nov 11, 2019, 5:07 PM IST

Updated : Nov 11, 2019, 5:34 PM IST

ಕ್ರಿಯೇಟಿವಿಟಿ ಇತ್ತು ಅಂದ್ರೆ ಚಿತ್ರರಂಗಕ್ಕೆ ಯಾರು ಬೇಕಾದ್ರೂ ಎಂಟ್ರಿ ಕೊಡ್ಬೋದು ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. ಹೌದು ಈ ಹಿಂದೆ ಸ್ಟಾರ್​ ನಟರ ಹಾಗೂ ನಿರ್ದೇಶಕರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇಂದು ನಿರ್ದೇಶಕರ ಕ್ಯಾಪ್​ ತೊಟ್ಟು ಆಕ್ಷನ್​ ಕಟ್​ ಹೇಳೋಕೆ ರೆಡಿಯಾಗಿದ್ದಾರೆ. ಅವರು ಬೇರೆ ಯಾರೂ ಅಲ್ಲ ನಿರ್ದೇಶಕ ಎ.ಪಿ ಅರ್ಜುನ್​ಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಬಸವ​​​ ಅಲಿಯಾಸ್​​ ರಾಮ್​​​.

ತಮ್ಮ ಹೆಸರನ್ನು ರಾಮ್​ ಎಂದು ಬದಲಾಯಸಿಕೊಂಡು ಇದೀಗ 'ರಣಬೇಟೆಗಾರ' ಎಂಬ ಥ್ರಿಲ್ಲರ್​ ಸಿನಿಮಾವನ್ನು ನಿರ್ದೇಶನ ಮಾಡಲು ಸಿದ್ದರಾಗಿದ್ದಾರೆ. ಸಿನಿಮಾದ ಮುಹೂರ್ತವು ಈಗಾಗಲೇ ನಡೆದಿದ್ದು, ಚಿತ್ರದ ಮುಹೂರ್ತದ ದಿನವೇ ಮೋಷನ್​​ ಪೋಸ್ಟರ್​​ ರಿಲೀಸ್​ ಮಾಡಿದ್ದಾರೆ. ಬೆಂಗಳೂರಿನ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ 'ಆಕಾಶ್', 'ಅರಸು' ಖ್ಯಾತಿಯ ಮಹೇಶ್ ಬಾಬು, ಎ.ಪಿ ಅರ್ಜುನ್ ಹಾಗೂ ನಿರ್ಮಾಪಕ ಅಣಜಿ ನಾಗರಾಜ್ ಆಗಮಿಸಿ ತನ್ನ ಶಿಷ್ಯನ ಹೊಸ ಸಾಹಸಕ್ಕೆ ಸಾಥ್ ನೀಡಿದರು.

'ರಣಬೇಟೆಗಾರ' ಚಿತ್ರ ಸಸ್ಪೆನ್ಸ್ ಜೊತೆ ಥ್ರಿಲ್ಲರ್ ಇದ್ದು, ಸಿನಿಮಾದ ಮೂಲಕ ಪೃಥ್ವಿರಾಜ್​ರನ್ನು ಚಂದನವನಕ್ಕೆ ಪರಿಚಯ ಮಾಡುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ನಾಯಕನಿಗೆ ಟಕ್ಕರ್ ಕೊಡುವ ನೆಗೆಟಿವ್ ರೋಲ್​​ನಲ್ಲಿ ಹೊಸ ನಟ ಚೇತನ್ ಕೃಷ್ಣ ಅಭಿನಯಿಸುತ್ತಿದ್ದಾರೆ.

ಅದೃಷ್ಟ ಅಂದ್ರೆ ಇದೇ ಕಣ್ರಿ.. ಈ ಹಿಂದೆ ಬರೀ ಕಾರುಚಾಲಕ, ಈಗ ಸಿನಿಮಾ ನಿರ್ದೇಶಕ!

ಚಿತ್ರದಲ್ಲಿ ತನು ಹಾಗೂ ಅನ್ನಪೂರ್ಣ ಎಂಬ ಇಬ್ಬರು ನಾಯಕಿಯರಿದ್ದು, ಕಾಲೇಜು ಹುಡುಗಿಯರ ಪಾತ್ರದಲ್ಲಿ ಕಾಣಿಸಲಿದ್ದಾರೆ. ಇನ್ನು ಸಿನಿಮಾವನ್ನು ಎಟಿಪಿ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಅಶ್ವಿನಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಮುಂಜಾನೆ ಮಂಜು ಕ್ಯಾಮರಾವರ್ಕ್ ಇದ್ದು, ಡಿಸೆಂಬರ್ ಅಂತ್ಯದಲ್ಲಿ ಇಲ್ಲ ಜನವರಿಯಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದೆ.

Intro:ಸ್ಯಾಂಡಲ್ ವುಡ್ ನಲ್ಲಿ " ರಣಭೇಟೆಗೆ" ಸಜ್ಜಾದ ನಿರ್ದೇಶಕ ಮಹೇಶ್ ಬಾಬು ಶಿಷ್ಯ...

ಬಣ್ಣದ ಲೋಕ ಅಂದ್ರೆ ಹಾಗೆ, ಯಾವಾಗ ಯಾರನ್ನೂ ತನ್ನತ್ತ ಕೈಬೀಸಿ ಕರೆಯುತ್ತ ಗೊತ್ತಿಲ್ಲ, ಏಕೆಂದರೆ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಎನ್ನಾರೈಗಳು ಕ್ಯಾಬ್ ಚಾಲಕರು ಆಟೋ ಡ್ರೈವರ್ ಗಳು ರೈತರು ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಈಗ ಅದೇ ರೀತಿ ನಿರ್ದೇಶಕರಾದ ಮಹೇಶ್ ಬಾಬು ಹಾಗೂ ಎಪಿ ಅರ್ಜುನ್ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ ಬಸವ, ಅಲಿಯಾಸ್ ರಾಮ್ ಡ್ರೈವರ್ ಪೋಸ್ಟ್ ನಿಂದ ಡೈರೆಕ್ಟರ್ ಪೋಸ್ಟ್ ಗೆ ಬಡ್ತಿ ಪಡೆದಿದ್ದಾರೆ. ಹೌದು ಕನ್ನಡ ಚಿತ್ರರಂಗದ ನಿರ್ಮಾಪಕರು ನಿರ್ದೇಶಕರ ಬಳಿ ಕಾರು ಚಾಲಕನಾಗಿ ಕೆಲಸ ಮಾಡಿದ ಬಸವ, ಈಗ ರಾಮ್ ಎಂದುತನ್ನಹೆಸರನ್ನು ಬದಲಿಸಿಕೊಂಡು,"ರಣಬೇಟೆಗಾರ"
ಎಂಬಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ನಿರ್ದೇಶನಮಾಡೋಕೆ
ರೆಡಿಯಾಗಿದ್ದು, ಇಂದು "ರಣಬೇಟೆಗಾರ" ಚಿತ್ರದ ಮುಹೂರ್ತನೆರವೇರಿದೆ,ಅಲ್ಲದೆ ಚಿತ್ರತಂಡಮುಹೂರ್ತದ
ದಿನವೇ ಟೈಟಲ್ ಮೊಷನ್ ಪೋಸ್ಟರನ್ನು ಲಾಂಚ್ ಮಾಡಿದೆ. ನಗರದ ಕಲಾವಿದರ ಸಂಘದಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಆಕಾಶ್ ಅರಸು ಖ್ಯಾತಿಯ ಮಹೇಶ್ ಬಾಬು, ಎಪಿ ಅರ್ಜುನ್ ಹಾಗೂ ನಿರ್ಮಾಪಕ ಅಣಜಿ ನಾಗರಾಜ್ ಆಗಮಿಸಿ ತನ್ನ ಶಿಷ್ಯನ ಹೊಸ ಸಾಹಸಕ್ಕೆ ಸಾಥ್ ನೀಡಿದರು. Body:ರಣಬೇಟೆಗಾರ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಅಕ್ಷನ್ ಗೆ ಒತ್ತು ಕೊಟ್ಟಿದ್ದು,
ಈ ಚಿತ್ರದ ಮೂಲಕ ಪೃಥ್ವಿರಾಜ್ ಹೊಸ ನಾಯಕನನ್ನು ಚಂದನವನಕ್ಕೆ ಪರಿಚಯ ಮಾಡುತ್ತಿದ್ದಾರೆ. ಅಲ್ಲದೆ ಚಿತ್ರದಲ್ಲಿ ನಾಯಕನಿಗೆ ಟಕ್ಕರ್ ಕೊಡುವ ನೆಗೆಟಿವ್ ರೋಲ್ ನಲ್ಲಿ ಹೊಸ ನಟ ಚೇತನ್ ಕೃಷ್ಣಅಭಿನಯಿ
ಸುತ್ತಿದ್ದಾರೆ. ಚಿತ್ರದಲ್ಲಿ ತನು ಹಾಗೂ ಅನ್ನಪೂರ್ಣ ಎಂಬ ಇಬ್ಬರು ನಾಯಕಿಯರಿದ್ದು ಕಾಲೇಜ್ ಹುಡುಗಿಯರ ಪಾತ್ರದಲ್ಲಿಕಾಣಿಸಲಿದ್ದಾರೆ.ವಿಶೇಷ ಅಂದ್ರೆ ಈ ಚಿತ್ರವನ್ನು
ಎಟಿಪಿ ಸಿನಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಅಶ್ವಿನಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ಈ ಚಿತ್ರಕ್ಕೆ ಮುಂಜಾನೆ ಮಂಜು ಕ್ಯಾಮರಾವರ್ಕ್ ಇದ್ದು,ಈಗಾಗಲೇ ಪ್ರಿಪ್ರೊಡಕ್ಷನ್ ವರ್ಕ್ ಅನ್ನು ಕಂಪ್ಲೀಟ್ ಮಾಡಿರುವ ಚಿತ್ರತಂಡ ಡಿಸೆಂಬರ್ ಅಂತ್ಯದಲ್ಲಿ ಇಲ್ಲ ಜನವರಿಯಲ್ಲಿ ಶೂಟಿಂಗ್ ಪ್ಲಾನ್ ಮಾಡಿಕೊಂಡಿದ್ದೆ.

ಸತೀಶ ಎಂಬಿ

Conclusion:
Last Updated : Nov 11, 2019, 5:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.