'ನಾನ್ 100 ಪರ್ಸೆಂಟ್ ವರ್ಜಿನ್' ಎಂಬ ಟ್ಯಾಗ್ ಲೈನ್ ಹೊಂದಿರುವ ಚಿತ್ರ 'ಬ್ರಹ್ಮಚಾರಿ'. 'ಅಯೋಗ್ಯ' ಸಿನಿಮಾದ ನಂತರ ನೀನಾಸಂ ಸತೀಶ್ ನಟಿಸಿರುವ ಈ ಸಿನಿಮಾ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ 'ಇಡ್ಕ ಇಡ್ಕ ವಸಿ ತಡ್ಕ ತಡ್ಕ' ಎನ್ನುವ ರೊಮ್ಯಾಂಟಿಕ್ ಹಾಡಿನ ಮೂಲಕ ಕುಂಬಳಕಾಯಿ ಒಡೆದಿತ್ತು.
- " class="align-text-top noRightClick twitterSection" data="">
ಇದೀಗ ಈ ಕಾಮಿಡಿ ಸಿನಿಮಾ 'ಬ್ರಹ್ಮಚಾರಿ' ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮುನ್ನ ನವೆಂಬರ್ 4ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿದೆ. ಟ್ರೈಲರ್ ಬಿಡುಗಡೆ ಬಗ್ಗೆ ನೀನಾಸಂ ಸತೀಶ್ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. 'ಬ್ರಹ್ಮಚಾರಿ' ಚಿತ್ರದ ಟೀಸರ್, ಹಾಡುಗಳು ನಿಮಗೆಲ್ಲಾ ಇಷ್ಟವಾಗಿದೆ. ಇದೀಗ ನಮ್ಮ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುತ್ತಿದ್ದೇವೆ. ನವೆಂಬರ್ 4ರಂದು ಸಂಜೆ 4ಕ್ಕೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಟ್ರೈಲರ್ ಬಿಡುಗಡೆ ಮಾಡುತ್ತಿದ್ದು, ಈ ಕಾರ್ಯಕ್ರಮಕ್ಕೆ ನಿಮಗೆಲ್ಲಾ ಸ್ವಾಗತ ಎಂದು ಸತೀಶ್ ಅಭಿಮಾನಿಗಳನ್ನು ಸ್ವಾಗತಿಸಿದ್ದಾರೆ. ಟ್ರೈಲರನ್ನು ಖಂಡಿತ ನೀವೆಲ್ಲರೂ ಇಷ್ಟಪಡುತ್ತೀರ' ಎಂದು ಸತೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 'ಬ್ರಹ್ಮಚಾರಿ' ಚಿತ್ರಕ್ಕೆ ಚಂದ್ರಮೋಹನ್ ಆ್ಯಕ್ಷನ್ ಕಟ್ ಹೇಳಿದ್ದು, ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ.