ತೆಲುಗಿನ ಟಾಪ್ ಕಮೇಡಿಯನ್ಗಳ ಪಟ್ಟಿಯಲ್ಲಿ ಬ್ರಹ್ಮಾನಂದಂ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ನಾಲ್ಕು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಇವರು ನಿಜ ಜೀವನದಲ್ಲಿ ಅಷ್ಟೇ ಗಂಭೀರ ವ್ಯಕ್ತಿ. ಅಲ್ಲದೆ ತಾವೊಬ್ಬ ಚಿತ್ರ ಕಲಾವಿದರೂ ಹೌದು. ಇವರು ಹಲವು ಅದ್ಭುತ ಚಿತ್ರಗಳನ್ನು ಬಿಡಿಸಿದ್ದು, ತಮಗಿಷ್ಟ ಆಗುವ ವಿಶೇಷ ಜನರಿಗೆ ಅದನ್ನು ಉಡುಗೊರೆಯಾಗಿ ಕೊಟ್ಟು ಖುಷಿ ಪಡುತ್ತಾರೆ. ಇದೀಗ ಅಲ್ಲು ಅರ್ಜುನ್‌ಗೆ ಹೊಸ ವರ್ಷದ ಗಿಫ್ಟ್ ಕೊಟ್ಟಿದ್ದಾರೆ.
![ಬ್ರಹ್ಮಾನಂದಂ](https://etvbharatimages.akamaized.net/etvbharat/prod-images/10083925_thumb.png)
ಪೆನ್ಸಿಲ್ನಲ್ಲಿ ಸ್ಕೆಚ್ ಮಾಡಿರುವ ವೆಂಕಟರಮಣ ದೇವರ ಫೋಟೋವನ್ನು ನಟ ಅಲ್ಲು ಅರ್ಜುನ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿರುವ ಅಲ್ಲು ಅರ್ಜುನ್ ಮನಸಾರೆ ಧನ್ಯವಾದ ತಿಳಿಸಿದ್ದಾರೆ.
![ಬ್ರಹ್ಮಾನಂದಂ](https://etvbharatimages.akamaized.net/etvbharat/prod-images/10083925_thumb2.png)
'ಬ್ರಹ್ಮಾನಂದಂರಿಂದ ಪಡೆದ ಬೆಲೆ ಕಟ್ಟಲಾಗದ ಉಡುಗೊರೆ ಇದು. ಅವರು ಬರೆದ ಈ ಪೆನ್ಸಿಲ್ ಸ್ಕೆಚ್ 45 ದಿನಗಳ ಪರಿಶ್ರಮ' ಎಂದು ಅಲ್ಲು ಅರ್ಜುನ್ ಬರೆದಿದ್ದಾರೆ.
ಈ ಹಿಂದೆ ಹಲವಾರು ದೇವರುಗಳ ಚಿತ್ರಗಳನ್ನು ಬಿಡಿಸಿದ್ದ ಬ್ರಹ್ಮಾನಂದಂ ಸಖತ್ ಸುದ್ದಿಯಾಗಿದ್ದರು. ಅಲ್ಲದೆ ಇವರು ಬಿಡಿಸಿದ್ದ ರಾಮಾಂಜನೇಯನ ಫೋಟೋ ವೈರಲ್ ಆಗಿತ್ತು..
-
THE MOST PRICELESS GIFT I RECEIVED FROM OUR BELOVED
— Allu Arjun (@alluarjun) January 1, 2021 " class="align-text-top noRightClick twitterSection" data="
BRAHMANANDAM GARU.
45 DAYS OF WORK .
HAND DRAWN PENCIL SKETCH . THANK YOU 🙏🏽 pic.twitter.com/DNvGd3iv3B
">THE MOST PRICELESS GIFT I RECEIVED FROM OUR BELOVED
— Allu Arjun (@alluarjun) January 1, 2021
BRAHMANANDAM GARU.
45 DAYS OF WORK .
HAND DRAWN PENCIL SKETCH . THANK YOU 🙏🏽 pic.twitter.com/DNvGd3iv3BTHE MOST PRICELESS GIFT I RECEIVED FROM OUR BELOVED
— Allu Arjun (@alluarjun) January 1, 2021
BRAHMANANDAM GARU.
45 DAYS OF WORK .
HAND DRAWN PENCIL SKETCH . THANK YOU 🙏🏽 pic.twitter.com/DNvGd3iv3B