'ನಾನ್ 100 ಪರ್ಸೆಂಟ್ ವರ್ಜಿನ್' ಎಂಬ ಟ್ಯಾಗ್ಲೈನ್ ಹೊಂದಿರುವ ಚಿತ್ರ ಬ್ರಹ್ಮಚಾರಿ. 'ಅಯೋಗ್ಯ' ಚಿತ್ರದ ನಂತರ ಸತೀಶ್ ನೀನಾಸಂ ನಟಿಸಿರುವ ಈ ಸಿನಿಮಾ ಆಗಲೇ ಶೂಟಿಂಗ್ ಮುಗಿಸಿ ಚಿತ್ರತಂಡ ಕುಂಬಳಕಾಯಿ ಕೂಡಾ ಒಡೆದಿದೆ.
- " class="align-text-top noRightClick twitterSection" data="">
'ಇಡ್ಕ ಇಡ್ಕ ವಸಿ ತಡ್ಕ ತಡ್ಕ' ಎಂಬ ರೊಮ್ಯಾಂಟಿಕ್ ಹಾಡಿನ ಮೂಲಕ ಚಿತ್ರತಂಡ ಪ್ಯಾಕ್ ಅಪ್ ಮಾಡಿದೆ. ಈ ಹಾಡಿನ ಲಿರಿಕಲ್ ವಿಡಿಯೋ ಇದೇ ತಿಂಗಳ 18ರಂದು ರಿಲೀಸ್ ಆಗುತ್ತಿದೆ. ಸತೀಶ್ ನೀನಾಸಂ ಈ ಹಾಡಿನ ಬಗ್ಗೆ ವಿಡಿಯೋ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಈ ಹಾಡಿನ ಶೂಟಿಂಗ್ ಫೋಟೋಗಳು ಕೂಡಾ ರಿವೀಲ್ ಆಗಿವೆ. 'ಬ್ರಹ್ಮಚಾರಿ ಸಿನಿಮಾ ಬಗ್ಗೆ ನಿಮಗೆ ಗೊತ್ತಿದೆ. ಟಾಕಿ ಪೋಷನ್ ಮುಗಿದಿದ್ದು, ಕುಂಬಳಕಾಯಿ ಒಡೆದಿದ್ದೇವೆ. ಕಡೆಯ ಹಾಡು ಇದಾಗಿದ್ದು ಸಂಪೂರ್ಣ ಶೂಟಿಂಗ್ ಕೂಡಾ ಮುಗಿದಿದೆ. ಲಿರಿಕಲ್ ವಿಡಿಯೋ ಕೂಡಾ ಶೀಘ್ರವೇ ರಿಲೀಸ್ ಆಗುತ್ತಿದೆ ಎಂದು ಸತೀಶ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಹಾಡಿಗೆ ಮುರಳಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಉದಯ್ ಮೆಹ್ತಾ ಈ ಸಿನಿಮಾವನ್ನು ನಿರ್ಮಿಸಿದ್ದು ಚಂದ್ರ ಮೋಹನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.