ETV Bharat / sitara

ಚಂದನವನದಲ್ಲಿ ಬಾಲಿವುಡ್​ ತಾರೆಯರ ಹೆಜ್ಜೆ ಗುರುತು

author img

By

Published : Nov 3, 2019, 5:19 PM IST

ಚಂದನವನ ಸ್ಟಾರ್ಸ್​​​ ಇತ್ತೀಚೆಗೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಸೈ ಅನ್ನಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತೆರೆ ಕಂಡ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್​​ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದ್ರೆ ಬಾಲಿವುಡ್​ನ ಕೆಲವು ಪ್ರಮುಖ ನಟರು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಮತ್ತು ಸಿನಿ ನಟರ ಹೆಜ್ಜೆ ಗುರುತು ಕುರಿತ ಮಾಹಿತಿ ಇಲ್ಲಿದೆ...

ಚಂದನವನಕ್ಕೆ ಕಾಲಿಟ್ಟ ಬಾಲಿವುಡ್​ ತಾರೆಯರು

ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಬಾಲಿವುಡ್​​ ತನ್ನದೇ ಆದ ಸ್ಥಾನವನ್ನು ಪಡೆದಿದೆ. ದೇಶದ ಒಟ್ಟಾರೆ ಸಿನಿ ಪ್ರಪಂಚವನ್ನು ನಾವು ನೋಡಿದ್ರೆ ತಕ್ಷಣಕ್ಕೆ ಕಣ್ಣ ಮುಂದೆ ಬಂದು ನಿಲ್ಲುವುದು ಹಿಂದಿ ಸಿನಿಮಾದಲ್ಲಿ ನಟಿಸಿರುವ ಮಾಹಾನ್​​ ದಿಗ್ಗಜರು. ಹಾಗಂತ ಬೇರೆ ಭಾಷೆಗಳಲ್ಲಿ ತೆರೆ ಕಂಡ ಸಿನಿಮಾಗಳು ಕಡಿಮೆಯೇನಿಲ್ಲ.

ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳು ಕೂಡ ದೇಶಾದ್ಯಂತ ಬಿಡುಗಡೆಯಾಗಿ ಸದ್ದು ಮಾಡಿವೆ. ಸೌತ್​​ ಇಂಡಿಯಾದಲ್ಲಿ ತನ್ನದೇ ಛಾಪು ಮೂಡಿಸಿರುವ ಸ್ಯಾಂಡಲ್​ವುಡ್​​​ ತಾರೆಯರು ಕೂಡ ಕೇವಲ ಇಂಡಿಯಾದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತಮ್ಮ ಕೀರ್ತಿಯನ್ನು ಮೆರೆಯುತ್ತಿದ್ದಾರೆ.

Bollywood stars in kannada cinema
ಶಿವರಾಜ್​ ಕುಮಾರ್​​

ಚಂದನವನ ಸ್ಟಾರ್ಸ್​​​ ಇತ್ತೀಚೆಗೆ ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಿ ಅಲ್ಲಿಯೂ ಸೈ ಅನ್ನಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ತೆರೆ ಕಂಡಿದ್ದ ಟಾಲಿವುಡ್​ನ ಈಗ, ಬಾಹುಬಲಿ ಸೇರಿದಂತೆ ಇತ್ತೀಚೆಗಷ್ಟೇ ತೆರೆ ಕಂಡ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ಕಿಚ್ಚ ಸುದೀಪ್​​ ನಟಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ ಇದೀಗ ತೆರೆ ಮೇಲೆ ಬರಲು ಸಜ್ಜಾಗಿರುವ ಸಲ್ಮಾನ್​ ಖಾನ್​ ಅಭಿನಯದ ದಬ್ಬಾಂಗ್​-3 ಸಿನಿಮಾದಲ್ಲೂ ಅಭಿನಯ ಚಕ್ರವರ್ತಿ ಕಾಣಿಸಿಕೊಂಡಿದ್ದು, ಬಾಲಿವುಡ್​​ನಲ್ಲೂ ತಮ್ಮ ಖದರ್​​ ತೋರುತ್ತಿದ್ದಾರೆ.

Bollywood stars in kannada cinema
ಸುನಿಲ್​​ ಶೆಟ್ಟಿ

ನಮ್ಮ ನಟರು ಬೇರೆ ಭಾಷೆಯಲ್ಲಿ ನಟಿಸುತ್ತಿದ್ದಾರೆ ನಿಜ. ಆದ್ರೆ ಬಾಲಿವುಡ್​​ನ ಯಾರೆಲ್ಲ ಸಿನಿ ತಾರೆಯರು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ಕುತೂಹಲ ನಿಮ್ಮಲ್ಲಿದ್ದರೆ ಈ ಸ್ಟೋರಿ ನೋಡಿ.

ಹೌದು, ಬಾಲಿವುಡ್​ನ ಕೆಲವು ಪ್ರಮುಖ ನಟರು ಕನ್ನಡದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾಗಳು ಮತ್ತು ಸಿನಿ ನಟರನ್ನು ಈ ಕೆಳಕಂಡಂತೆ ನೋಡಬಹುದು.

ಬಾಲಿವುಡ್​​​ ಬಿಗ್​ ಬಿ ಅಂತಾನೆ ಕರೆಸಿಕೊಳ್ಳುವ ಅಮಿತಾಬ್​​​ ಬಚ್ಚನ್​​ ಬಾಲಿವುಡ್​​ ಸಿನಿ ಪ್ರಪಂಚದ ಮೇರು ನಟ. ಇವರು ಕನ್ನಡದ ಅಮೃತಧಾರೆ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಧ್ಯಾನ್​​ ಜೊತೆಯಾಗಿ ರಮ್ಯಾ ನಟಿಸಿದ್ದು ಇದರಲ್ಲಿ ಬಿಗ್​ ಬಿ ಕಾಣಿಸಿಕೊಂಡಿದ್ದರು. ಇನ್ನು ಅಕ್ಷಯ್​ ಕುಮಾರ್​ ಕೂಡ ಡಾ.ವಿಷ್ಣುವರ್ಧನ್​ ನಾಯಕನಾಗಿ ನಸಿದ್ದ ವಿಷ್ಣು ವಿಜಯ್​ ಸಿನಿಮಾದಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದರು.

Bollywood stars in kannada cinema
ಅಕ್ಷಯ್​ ಕುಮಾರ್​​
Bollywood stars in kannada cinema
ಅಮಿತಾಬ್​ ಬಚ್ಚನ್​​

ಬಾಲಿವುಡ್​​ನ ಟಾಪ್​ ತಾರೆಯರ ಪೈಕಿ ಅನಿಲ್​​ ಕಪೂರ್​ ಕೂಡ ಒಬ್ರು. ಇವರು ಕೂಡ ಸ್ಯಾಂಡಲ್​​ವುಡ್​ನಲ್ಲಿ ನಟಿ ಲಕ್ಷ್ಮಿ ಜೊತೆಯಾಗಿ ಪಲ್ಲವಿ ಅನುಪಲ್ಲವಿ ಸಿನಿಮಾದ ಲೀಡ್​ ರೋಲ್​ ಪ್ಲೇ ಮಾಡಿದ್ದರು.

ಅನಿಲ್​ ಕಪೂರ್​​

ಇನ್ನು, ಹಳೆ ಸಿನಿಮಾ ನಟರಾದ ಪೃಥ್ವಿರಾಜ್​ ಕಪೂರ್​​ ಕೂಡ ಚಂದನವನಕ್ಕೆ ಭೇಟಿ ಕೊಟ್ಟಿದ್ದು, ಸಾಕ್ಷಾತ್ಕಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ನಟ ಸಾರ್ವಭೌಮ ಡಾ.ರಾಜ್​ ಕುಮಾರ್​​ ನಟಿಸಿದ್ದು ಇವರ ಜೊತೆ ಪೃಥ್ವಿರಾಜ್​ ಕಪೂರ್​ ಸ್ಕ್ರೀನ್​ ಶೇರ್​ ಮಾಡಿದ್ರು.

Bollywood stars in kannada cinema
ರಾಜ್​ ಕುಮಾರ್​​

ಇನ್ನು, ಬಾಲಿವುಡ್​​ನಲ್ಲಿ ನಾಲ್ಕು ದಶಕಗಳಿಂದ ತೊಡಗಿಸಿಕೊಂಡಿರುವ ಜಾಕಿ ಶ್ರಾಫ್​ ಕೂಡ ಕನ್ನಡ ಕೇರ್​ ಆಫ್​ ಫುಟ್​ ಪಾತ್​ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಮಾಸ್ಟರ್​​ ಕಿಶೋರ್​ ಬಾಲ ನಟನಾಗಿ ಕಾಣಿಸಿಕೊಂಡಿದ್ದರು.

Bollywood stars in kannada cinema
ಜಾಕಿ ಶ್ರಫ್​​

ಇನ್ನು ಸಲ್ಲು ಭಾಯ್​ ಕೂಡ ಕನ್ನಡ ಸಿನಿ ಪ್ರಪಂಚಕ್ಕೆ ಕಾಲಿಡಲು ಮನಸ್ಸು ಮಾಡಿದ್ದು, ಮುಂದಿನ ದಿನಗಳಲ್ಲಿ ಒಳ್ಳೆ ಕಥೆ ಸಿಕ್ಕರೆ ಖಂಡಿತ ಕನ್ನಡದಲ್ಲಿ ನಟಿಸುವುದಾಗಿ ತಿಳಿಸಿದ್ದಾರೆ.

Bollywood stars in kannada cinema
ಸಲ್ಮಾನ್​ ಖಾನ್​​

ಸದ್ಯ ಶೂಟಿಂಗ್​ ಹಂತದಲ್ಲಿರುವ ಕೋಟಿಗೊಬ್ಬ 3 ಸಿನಿಮಾದಲ್ಲಿ ಅಫ್ತಾದ್​ ಶಿವಾದಾಸ್​​ ಕಿಚ್ಚ ಸುದೀಪ್​ ಜೊತೆ ಸ್ಕ್ರೀನ್​ ಹಂಚಿಕೊಂಡಿದ್ದಾರೆ.

ಅಲ್ಲದೆ ಇತ್ತೀಚೆಗೆ ತೆರೆ ಕಂಡಿರುವ ಶಿವರಾಜ್​ ಕುಮಾರ್​ ನಟನೆಯ ರುಸ್ತುಂ ಚಿತ್ರದಲ್ಲಿ ವಿವೇಕ್​ ಓಬಿರಾಯ್​ ನಟಿಸಿದ್ದಾರೆ. ಇನ್ನು, ಕಿಚ್ಚ ಸುದೀಪ್​ ಅಭಿನಯಿಸಿರುವ ಪೈಲ್ವಾನ್​ ಸಿನಿಮಾದಲ್ಲಿ ಸುನೀಲ್​ ಶೆಟ್ಟಿ ಪೈಲ್ವಾನನಾಗಿ ನಟಿಸಿದ್ದಾರೆ.

Bollywood stars in kannada cinema
ಅಫ್ತಾಬ್​ ಶಿವದಾಸ್​

ಹೀಗೆ ಡಾ. ರಾಜಕುಮಾರ್​ ಕಾಲದಿಂದಲೂ ಬಾಲಿವುಡ್​​ ಮತ್ತು ಸ್ಯಾಂಡಲ್​ವುಡ್​ ​ನಂಟು ಇದ್ದೇ ಇದೆ. ಈ ಎರಡು ಭಾರತೀಯ ಸಿನಿ ಪ್ರಪಂಚವು ವಿಶ್ವ ವಿಖ್ಯಾತಿ ಪಡೆಯಬೇಕೆಂಬುದು ಎಲ್ಲರ ಆಶಯವಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.