ಫಿಟ್ ಆಗಿರುವ ಉದ್ದೇಶದಿಂದಲೇ ಬಾಲಿವುಡ್ ನಟ-ನಟಿಯರು ಅನೇಕ ರೀತಿಯ ಡಯಟ್ ಮಾಡುತ್ತಾರೆ. ತಾವು ಸೇವಿಸುವ ಆಹಾರ, ನೀರಿನ ಬಗ್ಗೆ ಇನ್ನಿಲ್ಲದ ಜಾಗ್ರತೆ ವಹಿಸುತ್ತಾರೆ. ಇದರಿಂದಲೇ ಅವರು ಫಿಟ್ ಆ್ಯಂಡ್ ಫೈನ್ ಆಗಿರುತ್ತಾರೆ. ಬಾಲಿವುಡ್ನ ಬ್ಯೂಟಿ ಮಲೈಕಾ ಆರೋರಾ ಕೂಡ ಇದರಿಂದ ಹೊರತಾಗಿಲ್ಲ.

ಪ್ರತಿ ದಿನ ಜಿಮ್ ಮಾಡುವುದು. ನಿಯಮಿತವಾಗಿ ಯೋಗ ಕ್ಲಾಸ್, ಆರೋಗ್ಯಕರ ಆಹಾರ ಸೇವನೆ ಹೇಗೆ..? ಹೀಗೆ ಅನೇಕ ರೀತಿಯ ದಿನಚರಿ ರೂಢಿಸಿಕೊಂಡಿರುತ್ತಾರೆ. ಇದರ ಮಧ್ಯೆ ಕೆಲವರು ತಾವು ಸೇವಿಸುವ ನೀರಿನ ಬಗ್ಗೆ ಕೂಡ ಅತಿ ಹೆಚ್ಚು ಕಾಳಜಿ ವಹಿಸುತ್ತಾರೆ.

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೇವನೆ ಮಾಡುವ ನೀರಿನ ಪ್ರತಿ ಲೀಟರ್ ಬೆಲೆ 600 ರೂಪಾಯಿ ಆಗಿದ್ದು, ರಷ್ಯಾದಿಂದ ಇದು ಆಮದು ಆಗುತ್ತದೆ. ಅದೇ ರೀತಿ ನಟಿ ಮಲೈಕಾ ಆರೋರಾ ಕೂಡ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಬ್ಲಾಕ್ ವಾಟರ್ ಸೇವನೆ ಮಾಡ್ತಿದ್ದಾರೆ. ಅದರ ಪ್ರತಿ ಲೀಟರ್ ಬೆಲೆ 200 ರೂ. ಆಗಿದೆ.

ಇಂದು ಬೆಳಗ್ಗೆ ಮನೆಯಿಂದ ಹೊರಗಡೆ ಬಂದಾಗ ಅವರ ಕೈಯಲ್ಲಿ ಬ್ಲಾಕ್ ವಾಟರ್ ಬಾಟಲಿ ಇತ್ತು. ಈ ವೇಳೆ ಪತ್ರಕರ್ತನೋರ್ವ ಪ್ರಶ್ನೆ ಮಾಡಿದಾಗ ತಾವು ಬ್ಲಾಕ್ ವಾಟರ್ ಸೇವನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಬ್ಲಾಕ್ ವಾಟರ್ನಲ್ಲಿ ಶೇ. 70ಕ್ಕಿಂತಲೂ ಅಧಿಕ ಮಿನರಲ್ಸ್ ಇವೆ. ಬಿ-ಟೌನ್ ಬೆಡಗಿ ಮಲೈಕಾ ಹಾಗೂ ಅರ್ಜುನ್ ಕಪೂರ್ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬುದು ಚರ್ಚೆಯಲ್ಲಿರುವ ವಿಷಯವಾಗಿದೆ.

ಇದನ್ನೂ ಓದಿರಿ: ಒಬ್ಬನನ್ನ ಪ್ರೀತಿಸಿ ಮತ್ತೊಬ್ಬನೊಂದಿಗೆ ಮದುವೆ.. ಯುವತಿ ಕೊಲೆ ಮಾಡಿದ ಲವರ್!