ETV Bharat / sitara

'ಆರ್​ಆರ್​ಆರ್​' ಚಿತ್ರತಂಡ ಸೇರಿಕೊಂಡ ಬಾಲಿವುಡ್ ನಟ ಅಜಯ್ ದೇವಗನ್​​​​ - Ajay Devagan RRR shoot will start soon

ಬಾಲಿವುಡ್ ನಾಯಕ ಅಜಯ್ ದೇವಗನ್ 'ಆರ್​ಆರ್​ಆರ್' ಸಿನಿಮಾ ಸೆಟ್​​​ಗೆ ಸೇರಿಕೊಂಡಿದ್ದಾರೆ. ಅಜಯ್ ದೇವಗನ್ ಹಾಗೂ ರಾಜಮೌಳಿ ಮಾತನಾಡುತ್ತಿರುವ ಫೋಟೋವನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. ಆದರೆ ಚಿತ್ರದಲ್ಲಿ ಅಜಯ್ ದೇವಗನ್ ಯಾವ ಪಾತ್ರ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ.

Ajay devagan, Rajmouli
ಅಜಯ್ ದೇವಗನ್, ರಾಜಮೌಳಿ
author img

By

Published : Jan 21, 2020, 2:14 PM IST

ಸ್ಟಾರ್ ನಿರ್ದೇಶಕ ಎಸ್​.ಎಸ್. ರಾಜಮೌಳಿ ನಿದೇಶನದ ಆರ್​ಆರ್​ಆರ್ ಸಿನಿಮಾ ಬಗ್ಗೆ ಪ್ರತಿದಿನ ಏನಾದರೂ ಹೊಸ ಸುದ್ದಿ ಹೊರಬೀಳುತ್ತಲೇ ಇರುತ್ತದೆ. ಕಿಚ್ಚ ಸುದೀಪ್ ಕೂಡಾ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ಮಾತು ಇತ್ತೀಚೆಗೆ ಕೇಳಿಬಂದಿತ್ತು. ಇದೀಗ ಈ ಸಿನಿಮಾ ಬಗ್ಗೆ ಮತ್ತೊಂದು ಅಪ್​ಡೇಟ್ ಹೊರಬಿದ್ದಿದೆ.

ಬಾಲಿವುಡ್ ನಾಯಕ ಅಜಯ್ ದೇವಗನ್ 'ಆರ್​ಆರ್​ಆರ್' ಸಿನಿಮಾ ಸೆಟ್​​​ಗೆ ಸೇರಿಕೊಂಡಿದ್ದಾರೆ. ಅಜಯ್ ದೇವಗನ್ ಹಾಗೂ ರಾಜಮೌಳಿ ಮಾತನಾಡುತ್ತಿರುವ ಫೋಟೋವನ್ನು ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿದೆ. ಆದರೆ ಚಿತ್ರದಲ್ಲಿ ಅಜಯ್ ದೇವಗನ್ ಯಾವ ಪಾತ್ರ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ. ಈ ಬಗ್ಗೆ ಅಭಿಮಾನಿಗಳು ಕೂಡಾ ಕಾತರರಾಗಿದ್ದಾರೆ. ಚಿತ್ರದಲ್ಲಿ ರಾಮ್​ಚರಣ್​​​​ ಅಲ್ಲೂರಿ ಸೀತಾರಾಮ್ ಹಾಗೂ ಜ್ಯೂ. ಎನ್​ಟಿಆರ್​​ ಕೋಮರಂ ಭೀಮ ಆಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಆಲಿಯಾ ಭಟ್, ಒಲಿವಿಯಾ ಮೊರಿಸ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದುವರೆಗೂ ಸುಮಾರು ಶೇಕಡಾ 70 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಸ್ತುತ ಅಜಯ್ ದೇವಗನ್ ಸೆಟ್​​​​ಗೆ ಕಾಲಿಟ್ಟಿದ್ದು ಅವರ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದು ಡಿವಿವಿ ದಾನಯ್ಯ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುಮಾರು 350 ಕೋಟಿ ರೂಪಾಯಿ ಬಜೆಟ್​​​ನಲ್ಲಿ ಸಿನಿಮಾ ತಯಾರಾಗುತ್ತಿದೆ. ಸಿನಿಮಾ ಈ ವರ್ಷ ಜುಲೈ 30 ರಂದು ಬಿಡುಗಡೆಯಾಗಲಿದೆ.

Intro:Body:

RRR ajay devagan

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.