ETV Bharat / sitara

ಈ ಬಾರಿ ಬಿಗ್​ಬಾಸ್​ ಮನೆಯಲ್ಲೇ ಇಡಲಾಗಿದೆ ಟ್ರೋಫಿ... ಯಾಕೆ ಗೊತ್ತಾ? - ಬಿಗ್​ಬಾಸ್​ ಟ್ರೋಫಿ,

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ನ ಆರು ಸೀಸನ್​ಗಳು ಯಶಸ್ವಿಯಾಗಿ ಮುಗಿದಿದ್ದು, ಇದೀಗ ಏಳನೇ ಸೀಸನ್ ಅದ್ಧೂರಿಯಾಗಿ ಆರಂಭಗೊಂಡಿದೆ. ಆರು ಸೀಸನ್​ಗಳಲ್ಲಿ ಬಿಗ್​ಬಾಸ್​ ವಿಜೇತರಿಗೆ ನೀಡುವ ಟ್ರೋಫಿ ಗ್ರ್ಯಾಂಡ್ ಫಿನಾಲೆಯಲ್ಲಿ ಮಾತ್ರ ಕಾಣಸಿಗುತ್ತಿತ್ತು. ಆದರೆ ಈ ಸೀಸನ್​ನಲ್ಲಿ ಹಾಗಲ್ಲ!

ಈ ಬಾರಿ ಮನೆಯಲ್ಲೇ ಇದೆ ಬಿಗ್ ಬಾಸ್ ಟ್ರೋಫಿ
author img

By

Published : Oct 16, 2019, 7:48 AM IST

Updated : Oct 16, 2019, 9:19 AM IST

ಬಿಗ್​​ಬಾಸ್ ಸೀಸನ್ 7ರ ವಿಜೇತರಿಗೆ ಸಿಗುವ ಟ್ರೋಫಿಯನ್ನು ಮೊದಲ ದಿನವೇ ತೋರಿಸಲಾಗಿದೆ. ಅದು ಕೂಡಾ ಬಿಗ್​​ಬಾಸ್ ಮನೆಯಲ್ಲಿ. ಹೌದು, ಬಿಗ್​​ಬಾಸ್ ಮನೆಯೊಳಗಿನ ವಿಶಾಲವಾದ ಲಿವಿಂಗ್ ರೂಂನಲ್ಲಿ, ಅದು ಎತ್ತರದಲ್ಲಿ, ಯಾರ ಕೈಗೂ ಎಟುಕದ ಹಾಗೆ ಈ ಟ್ರೋಫಿ ಇಡಲಾಗಿದೆ.

ಟ್ರೋಫಿಯ ಜೊತೆಗೆ ಇನ್ನೊಂದು ವಿಶೇಷವೂ ಕೂಡಾ ಬಿಗ್​​ ಮನೆಯಲ್ಲಿದೆ. ಅದೇನೆಂದರೆ ಕಳೆದ ಆರು ಸೀಸನ್​ನಲ್ಲಿ ವಿಜೇತರಾದವರ ಫೋಟೋಗಳನ್ನು ಕೂಡಾ ಲಿವಿಂಗ್ ರೂಂನಲ್ಲಿ ಹಾಕಲಾಗಿದೆ. ಜೊತೆಗೆ ಈ ಸೀಸನ್​ನಲ್ಲಿ ಯಾರು ವಿಜೇತರಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಫೋಟೋಗಳ ಜಾಗದಲ್ಲಿ ಒಂದು ಖಾಲಿ ಫ್ರೇಂ ಕೂಡಾ ಇಡಲಾಗಿದೆ.

ಬಿಗ್​​ಬಾಸ್ ಮನೆ ಸೇರಿರುವ ಎಲ್ಲಾ ಸ್ಪರ್ಧಿಗಳಿಗೆ ಈ ಟ್ರೋಫಿ ಸ್ಫೂರ್ತಿ. ಯಾಕೆಂದರೆ ಪ್ರತಿದಿನ ಈ ಟ್ರೋಫಿ ಕಣ್ಣ ಮುಂದೆ ಕಾಣುತ್ತಿದ್ದರೆ ನಿಜಕ್ಕೂ ಪ್ರೋತ್ಸಾಹ ಸಿಕ್ಕಂತೆ. ಖಾಲಿ ಇರುವ ಫೋಟೋ ಫ್ರೇಂನಲ್ಲಿ ತಮ್ಮ ಫೋಟೋ ಬರಬೇಕು ಎಂಬ ಆಸೆಯಿಂದ ಚೆನ್ನಾಗಿ ಟಾಸ್ಕ್​ಗಳನ್ನು ಮಾಡಬಹುದು ಎಂದು ಟ್ರೋಫಿಯನ್ನು ಇಟ್ಟಿರುವ ಬಗ್ಗೆ ವಿವರಿಸುತ್ತಾರೆ ಕಿಚ್ಚ ಸುದೀಪ್.

Intro:Body: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ಆರು ಸೀಸನ್ ಗಳು ಯಶಸ್ವಿಯಾಗಿ ಮುಗಿದಿದ್ದು ಇದೀಗ ಏಳನೇ ಸೀಸನ್ ಅದ್ಧೂರಿಯಾಗಿ ಆರಂಭಗೊಂಡಿದೆ.
ಆರು ಸೀಸನ್ ಗಳಲ್ಲಿ ಬಿಗ್ ಬಾಸ್ ವಿಜೇತರಿಗೆ ನೀಡುವ ಟ್ರೋಫಿ ಗ್ರ್ಯಾಂಡ್ ಫಿನಾಲೆಯಲ್ಲಿ ಮಾತ್ರ ಕಾಣಸಿಗುತ್ತಿತ್ತು. ಆದರೆ ಈ ಸೀಸನ್ ನಲ್ಲಿ ಹಾಗಲ್ಲ!

ಬಿಗ್ ಬಾಸ್ ಸೀಸನ್ 7 ರ ವಿಜೇತರಿಗೆ ಸಿಗುವ ಟ್ರೋಫಿಯನ್ನು ಮೊದಲ ದಿನವೇ ತೋರಿಸಲಾಗಿದೆ. ಅದು ಕೂಡಾ ಬಿಗ್ ಬಾಸ್ ಮನೆಯಲ್ಲಿ. ಹೌದು. ಬಿಗ್ ಬಾಸ್ ಮನಯೊಳಗಿನ ವಿಶಾಲವಾದ ಲಿವಿಂಗ್ ರೂಂ ನಲ್ಲಿ ಎತ್ತರದಲ್ಲಿ, ಯಾರ ಕೈಗೆ ಎಟುಕದ ಹಾಗೇ ಈ ಟ್ರೋಫಿಯನ್ನು ಇಡಲಾಗಿದೆ.

ಟ್ರೋಫಿಯ ಜೊತೆಗೆ ಇನ್ನೊಂದು ವಿಶೇಷವೂ ಕೂಡಾ ದೊಡ್ಮನೆಯಲ್ಲಿದೆ. ಅದೇನೆಂದರೆ ಕಳೆದ ಆರು ಸೀಸನ್ ನಲ್ಲಿ ವಿಜೇತರಾದವರ ಫೋಟೋಗಳನ್ನು ಕೂಡಾ ಲಿವಿಂಗ್ ರೂಂ ನಲ್ಲಿ ಹಾಕಲಾಗಿದೆ. ಜೊತೆಗೆ ಈ ಸೀಸನ್ ರ ನಲ್ಲಿ ಯಾರು ವಿಜೇತರಾಗಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಫೋಟೋಗಳ ಜಾಗದಲ್ಲಿ ಒಂದು ಖಾಲಿ ಫ್ರೇಂ ಕೂಡಾ ಇಡಲಾಗಿದೆ.

ಬಿಗ್ ಬಾಸ್' ಮನೆ ಸೇರಿರುವ ಎಲ್ಲಾ ಸ್ಪರ್ಧಿಗಳಿಗೆ ಈ ಟ್ರೋಫಿ ಸ್ಫೂರ್ತಿ. ಯಾಕೆಂದರೆ ಪ್ರತಿದಿನ ಈ ಟ್ರೋಫಿ ಕಣ್ಣ ಮುಂದೆ ಕಾಣುತ್ತಿದ್ದರೆ ನಿಜಕ್ಕೂ ಪ್ರೋತ್ಸಾಹ ದೊರೆತಂತೆ. ಖಾಲಿ ಇರುವ ಫೋಟೋ ಫ್ರೇಮ್ ನಲ್ಲಿ ತಮ್ಮ ಫೋಟೋ ಬರಬೇಕು ಎಂಬ ಬಯಕೆಯಿಂದ ಚೆನ್ನಾಗಿ ಟಾಸ್ಕ್ ಗಳನ್ನು ಮಾಡಬಹುದು ಎಂದು ಟ್ರೋಫಿಯನ್ನು ಇಟ್ಟಿರುವ ಬಗ್ಗೆ ವಿವರಿಸುತ್ತಾರೆ ಕಿಚ್ಚ ಸುದೀಪ್.Conclusion:
Last Updated : Oct 16, 2019, 9:19 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.