ನಿನ್ನೆ ಎಲಿಮಿನೇಟ್ ಆದ ಪ್ರಿಯಾಂಕಾ ಅವರು ಚಕ್ರವರ್ತಿ ಚಂದ್ರಚೂಡ್ ಅವರನ್ನು ನೇರ ನಾಮಿನೇಟ್ ಮಾಡಿದ ಕಾರಣ ಅಶ್ಲೀಲ ಸನ್ನೆ ತೋರಿಸಿದ ಚಕ್ರವರ್ತಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಕಿಡಿಕಾರಿದ್ದಾರೆ. ಅಲ್ಲದೆ ಮುಂದಿನ ವಾರ ಎಲಿಮಿನೇಟ್ ಮಾಡುವಂತೆ ಪ್ರೇಕ್ಷಕರು ಒತ್ತಾಯಿಸಿದ್ದಾರೆ.
ಪ್ರತಿಭಾರಿಯೂ ಹೆಣ್ಣಿಗೆ ಗೌರವ ಕೊಡುವ ಮನುಷ್ಯ ನಾನು ಎಂದು ಹೇಳಿಕೊಳ್ಳುವ ಚಕ್ರವರ್ತಿ, ಈ ರೀತಿ ಮಾಡಿರುವುದು ಅಜ್ಞಾನದ ಪರಮಾವಧಿ. ಅಲ್ಲದೇ, ಇದೇನಾ ಹೆಣ್ಣಿಗೆ ಗೌರವ ಕೊಡುವ ರೀತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ.
ಈ ಸೀಸನ್ ಸೇರಿದಂತೆ ಎಲ್ಲಾ ಸೀಸನ್ನಲ್ಲಿ ಇಂತಹ ವ್ಯಕ್ತಿತ್ವ ಇರಲಿಲ್ಲ. ಬಿಗ್ ಬಾಸ್ ಈ ಕೂಡಲೇ ಚಕ್ರವರ್ತಿ ಅವರ ವಿರುದ್ಧ ಕ್ರಮ ಕೈಗೊಂಡು ಎಲಿಮಿನೇಟ್ ಮಾಡುವಂತೆ ಒತ್ತಾಯಿಸಿದ್ದಾರೆ.
ಕಳೆದ ಮೂರು ವಾರಗಳಿಂದಲೂ ಚಕ್ರವರ್ತಿಯವರ ಮಿತಿಮೀರಿದ ವರ್ತನೆ ಸುದೀಪ್ ಸೇರಿ ಮನೆಯ ಎಲ್ಲಾ ಸದಸ್ಯರಲ್ಲಿ ಬೇಸರ ಮೂಡಿಸಿತ್ತು. ಅಲ್ಲದೇ ಸುದೀಪ್ ಎಚ್ಚರಿಕೆ ನೀಡಿದ್ದರು.
ಸದ್ಯ ಚಕ್ರವರ್ತಿ ಚಂದ್ರಚೂಡ್ ಮಾಡಿಕೊಂಡಿರುವ ಎಡವಟ್ಟಿನಿಂದ ಹಾಗೂ ನೇರ ನಾಮಿನೇಟ್ ಆಗಿರುವ ಕಾರಣ ಮುಂದಿನ ವಾರ ಎಲಿಮಿನೇಟ್ ಆಗುವ ಎಲ್ಲಾ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ.