ಬಿಗ್ ಬಾಸ್ ಸೀಸನ್ 7 ಅಕ್ಟೊಬರ್ 20 ರಿಂದ ಆರಂಭವಾಗಲಿದೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸೆಲಬ್ರಿಟಿಗಳು ಮತ್ತು ಸಾಮಾನ್ಯ ಜನರು ಈ ಬಾರಿ ಇರಲಿದ್ದಾರೆ. ಸೀಸನ್ 6ವರೆಗೆ ಹೆಚ್ಚಾಗಿ ಸೆಲೆಬ್ರಿಟಿಗಳನ್ನು ಒಳಗೊಂಡಿರುವ ಥೀಮ್ ಅನ್ನು ವಾಹಿನಿ ಅಳವಡಿಸಿಕೊಂಡಿತ್ತು. ಆದರೆ, ಬಿಗ್ ಬಾಸ್ ಅಂತಾರಾಷ್ಟ್ರೀಯ ಆವೃತ್ತಿ ಬಿಗ್ ಬ್ರದರ್ ಹೆಚ್ಚಾಗಿ ಕಾಮನ್ ಮ್ಯಾನ್ ಒಳಗೊಂಡಿದೆ. ಹೀಗಾಗಿ ಕಳೆದ ಸೀಸನ್ ಅಲ್ಲಿ ಸಾಮಾನ್ಯ ಜನರಿಗೆ ಸಿಕ್ಕ ಪ್ರೋತ್ಸಾಹ, ಈ ಬಾರಿಯೂ ಸಿಗಲಿದೆ.
ಕಾಮನ್ ಮ್ಯಾನ್ ಜೊತೆಗೆ ಸೆಲಬ್ರಿಟಿಗಳು ಕೂಡ ಇರುತ್ತಾರೆ. ಏಕೆಂದರೆ, ಜನರಿಗೆ ಅಂದರೆ ಪ್ರೇಕ್ಷಕರಿಗೆ ಅವರ ಜೀವನದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ಇರುತ್ತದೆ ಎಂಬುದು ಕಾರ್ಯಕ್ರಮ ನಿರ್ವಹಕರ ಅನಿಸಿಕೆ.
ಸೀಸನ್ 7ರಲ್ಲಿ ಕಿರುತೆರೆ, ಸಿನೆಮಾ ಮತ್ತು ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ 15 ಮಂದಿ ಇರಲಿದ್ದಾರೆ. ಇದೇ ಸೆ.11 ರಂದು ಸುದೀಪ್ ಅವರ ಪ್ರೊಮೋ ಶೂಟ್ ಮಾಡಲಾಗುವುದು, ಸೆ.13 ರಂದು ಪ್ರೊಮೋ ಪ್ರಸಾರ ಮಾಡಲು ವಾಹಿನಿ ಚಿಂತನೆ ನಡೆಸಿದೆ.
ಇದುವರೆಗೂ ಅಂದರೆ 6 ನೇ ಸೀಸನ್ಗಳಲ್ಲಿ 108 ಸ್ಪರ್ಧಿಗಳು ಭಾಗವಹಿಸಿದ್ದು, 80ಕ್ಕೂ ಹೆಚ್ಚು ಮಂದಿ ಖ್ಯಾತಿ ಪಡೆದಿದ್ದಾರೆ. ಕಳೆದ ಸೀಸನ್ನಲ್ಲಿ ರೈತ ಶಶಿಕುಮಾರ್ ಜಯಗಳಿಸಿದ್ದರು. ಬಿಗ್ ಬಾಸ್ ಕನ್ನಡ ಸೀಸನ್ 7 ಅಕ್ಟೋಬರ್ 20 ರಿಂದ 100 ದಿನಗಳ ಕಾಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.