ಕಿನ್ನರಿ ಧಾರಾವಾಹಿಯ ಮಣಿಯಾಗಿ ಕಿರುತೆರೆಗೆ ಕಾಲಿಟ್ಟ ಕುಂದಾಪುರದ ಕುವರಿ ಭೂಮಿ ಶೆಟ್ಟಿ ಇಂದು ರಾಯಲ್ ಶೆಟ್ರು ಆಗಿ ಪರಿಚಿತರಾಗಿದ್ದಾರೆ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡ ಭೂಮಿ ಶೆಟ್ಟಿ ಟಾಪ್ 5 ನೇ ಸ್ಥಾನದಲ್ಲಿದ್ದರು. ಇನ್ನು 'ಇಕ್ಕಟ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟಿರುವ ಭೂಮಿ ಶೆಟ್ಟಿ, ಇದೀಗ ಮತ್ತೆ ಕಿರುತೆರೆಗೆ ಕಾಲಿಡಲಿದ್ದಾರೆ.

ಭೂಮಿ ಈ ಬಾರಿ ನಟಿಯಾಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಿಗೆ ನಿರೂಪಕಿಯಾಗಿ ಪರದೆ ಮೇಲೆ ಬರಲಿದ್ದಾರೆ. ಹೌದು, ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹಾಸ್ಯ ಕಾರ್ಯಕ್ರಮ ಮಜಾಭಾರತದ ನಿರೂಪಕಿಯಾಗಿ ಇವರು ಕಾಣಿಸಿಕೊಳ್ಳಲಿದ್ದಾರೆ.

ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ತಮ್ಮ ನೆಚ್ಚಿನ ನಟಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ವೀಕ್ಷಕರು ಖುಷಿಯಾಗಿದ್ದಾರೆ. ಇಷ್ಟು ದಿನ ನಟಿಯಾಗಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ರಾಯಲ್ ಶೆಟ್ರು ಇದೀಗ ನಿರೂಪಕಿಯಾಗಿ ಮನರಂಜನೆ ನೀಡಲು ಬರುತ್ತಿದ್ದಾರೆ.
