ಚಂದನವನದಲ್ಲಿ ಇತ್ತೀಚೆಗೆ ವಿವಿಧ ಆಯಾಮಗಳ ಚಿತ್ರಗಳು ಸಿದ್ದವಾಗುತ್ತಿವೆ. ತುಂಬಾ ದಿನಗಳ ಮೇಲೆ ರಾಧಿಕಾ ಕುಮಾರಸ್ವಾಮಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು "ಭಯರಾದೇವಿ"ಯಾಗಿ ಭಯ ಹುಟ್ಟಿಸಲು ರೆಡಿಯಾಗಿದ್ದಾರೆ.
ಹೌದು ಇಂದು ಆಯುಧ ಪೂಜೆಯ ವಿಶೇಷವಾಗಿ ರಮೇಶ್ ಅರವಿಂದ್ ಮತ್ತು ರಾಧಿಕಾ ಕುಮಾರಸ್ವಾಮಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಭೈರಾದೇವಿ ಸಿನಿಮಾದ "ಬಂದಾಳಮ್ಮ ಕಾಳಿಕಾ" ಲಿರಿಕಲ್ ಸಾಂಗ್ ರಿಲೀಸ್ ಮಾಡಲಾಗಿದೆ.
ಈ ಹಾಡಿನಲ್ಲಿ ಅಘೋರಿಯಂತೆ ಕಾಣಲಿರುವ ರಾಧಿಕಾ ಕುಮಾರಸ್ವಾಮಿ ನೋಡುಗರಿಗೆ ಅವರ ವೇಷ ಮತ್ತು ನಟನೆ ಭಯ ಹುಟ್ಟುಸುವಂತಿದೆ. ಈ ಹಾಡಿಗೆ ಶ್ರೀ ಜೈ ಸಾಹಿತ್ಯ ಬರೆದಿದ್ದು ಮಾಲತಿ ಕಂಠದಾನ ಮಾಡಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಬಂದಾಳಮ್ಮ ಕಾಳಿಕಾ ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
- " class="align-text-top noRightClick twitterSection" data="">