ಹೈದಾರಾಬಾದ್ (ತೆಲಂಗಾಣ): ಟಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ 'ಭೀಮ್ಲಾ ನಾಯಕ' ಚಿತ್ರದ ಸಿಕ್ವೆಲ್ ಸೇರಿ ಹಲವು ವಿಷಯಗಳ ರಾಣಾ ದಗ್ಗುಬಾಟಿ ಬಹಿರಂಗ ಪಡಿಸಿದ್ದಾರೆ.
- " class="align-text-top noRightClick twitterSection" data="
">
'ಭೀಮ್ಲಾ ನಾಯಕ' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ರಿಮೇಕ್ ಆಗಿದೆ. ಈ ಚಿತ್ರದಲ್ಲಿ ಡೇನಿಯಲ್ ಶೇಖರ್ ಪಾತ್ರದಲ್ಲಿ ರಾಣಾ ದಗ್ಗುಬಾಟಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಣಾ ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಡೇನಿಯಲ್ ಶೇಖರ್ ಪಾತ್ರದಲ್ಲಿ ನಟಿಸುವುದು ನನಗೆ ತುಂಬಾ ಖುಷಿಕೊಟ್ಟಿದೆ. ಈ ಪಾತ್ರವನ್ನು ನಿರ್ವಹಿಸಲು 'ಅಯ್ಯಪ್ಪನುಂ ಕೋಶಿಯುಂ' ಚಿತ್ರವನ್ನು ನೋಡಿ ಕಲಿತುಕೊಂಡಿದ್ದೆ. ಆದರೆ, ತೆಲುಗಿನಲ್ಲಿ ಚಿತ್ರ ತುಂಬಾ ಭಿನ್ನವಾಗಿ ಮೂಡಿ ಬಂದಿದೆ. ನನ್ನ ಪಾತ್ರವೂ ತುಂಬಾ ಅಬ್ಬರದಿಂದ ಕೂಡಿದೆ ಎಂದಿದ್ದಾರೆ.
ಇದನ್ನೂ ಓದಿ: ಇನ್ನೂ ಯಾಕೆ ಮದುವೆ ಆಗಿಲ್ಲವೆಂಬ ಸತ್ಯ ಬಿಚ್ಚಿಟ್ಟ 'ಬಾಹುಬಲಿ' ಪ್ರಭಾಸ್
ಇದೇ ವೇಳೆ 'ಭೀಮ್ಲಾ ನಾಯಕ' ಸಿಕ್ವೆಲ್ ಬಗ್ಗೆ ಮಾತನಾಡಿರುವ ರಾಣಾ, ಸಿಕ್ವೆಲ್ ಬರುತ್ತೋ, ಇಲ್ಲವೋ ಗೊತ್ತಿಲ್ಲ. ಈಗ ಮಾತ್ರ ಚಿತ್ರದ ಕತೆ ಮುಗಿದಿದೆ ಎಂದಷ್ಟೇ ಹೇಳಿದ್ದಾರೆ.