ವಿಷ್ಣು ಸ್ಮಾರಕ ಬೆಂಗಳೂರೋ ಅಥವಾ ಮೈಸೂರಿನಲ್ಲಿ ನಿರ್ಮಿಸಬೇಕೆಂಬುದರ ಬಗ್ಗೆ ಈಗಾಗಲೇ ಎಂಟು ವರ್ಷಗಳಿಂದ ಚರ್ಚೆ ಆಗುತ್ತಲೇ ಇದೆ. ಈ ಬಗ್ಗೆ ಇಂದು ಸುದ್ದಿಗೋಷ್ಠಿ ಕರೆದು ತಮ್ಮ ಅಂತಿಮ ನಿರ್ಧಾರ ಪ್ರಕಟಿಸಬೇಕೆಂದು ಭಾರತಿ ಯೋಚಿಸಿದ್ದರು. ಆದರೆ, ಕೆಲವು ಹಿರಿಯ ಅಧಿಕಾರಗಳು ಈ ಚಿಂತನೆ ಬೇಡ, ಈಗ ಚುನಾವಣೆ ಸಮಯ, 15 ದಿವಸಗಳ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಕ್ಕೆ ಭಾರತಿ ಅವರು ಸುಮ್ಮನಾಗಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರ ಅಂತಿಮ ನಿರ್ಧಾರ ಏನು ಎಂಬುದು ಇದುವರೆಗೂ ಗೊತ್ತಾಗಿಲ್ಲ.
ಇನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಪಕ್ಕದಲ್ಲೇ ವಿಷ್ಣುದಾದಾ ಅವರ ಅಂತ್ಯ ಕ್ರಿಯೆ ಮಾಡಿದ್ದು. ಅದೇ ಜಾಗದಲ್ಲಿ ಸ್ಮಾರಕ ಆಗಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದ್ದಾರೆ. ಕನಿಷ್ಠ 100x100 ಜಾಗ ಕೊಡಿ ನಾವೇ ಒಂದು ಸ್ಮಾರಕ ಮಾಡಿಕೊಳ್ಳುತ್ತೇವೆ ಎಂದು ಸಹ ಅಭಿಮಾನಿಗಳು ಬೇಡಿಕೆ ಇಟ್ಟಿದಾರೆ.
ಅತ್ತ ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಥಳ ನಿಗದಿ ಮಾಡಿ, ಅಲ್ಲಿ ಗುದ್ದಲಿ ಪೂಜೆ ಸಹ ಮಾಡಿದ್ದರು. ಅದಾದ ಮೇಲೆ ಆ ಜಾಗಕ್ಕೆ ತಕರಾರು ಬಂದಿತು. ಇದು ಭಾರತಿ ಅವರ ತೀವ್ರವಾದ ಅಸಮಾಧಾನಕ್ಕೆ ಕಾರಣವಾಗಿದೆ.