ನಾಳೆ ಅಂದರೆ ಜನವರಿ 17 ರಂದು ‘ಶ್ರೀ ಭರತ ಬಾಹುಬಲಿ’ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಈ ಸಿನಿಮಾವನ್ನು ಮಂಜು ಮಾಂಡವ್ಯ ನಿರ್ದೇಶನ ಮಾಡಿದ್ದು, ರಿಯಲ್ ಎಸ್ಟೇಟ್ ಉದ್ಯಮಿ ಶಿವಪ್ರಕಾಶ್ ಬಂಡವಾಳ ಹೂಡಿದ್ದಾರೆ. ಅಲ್ಲದೆ, ಸಿನಿಮಾವನ್ನು ಚಿತ್ರ ಮಂದಿದಲ್ಲಿ ನೋಡಿದವರಿಗೆ ಲಕ್ಕಿ ಡಿಪ್ ಮೂಲಕ ಒಂದು ಕೋಟಿ ಬಹುಮಾನ ಸಹ ಘೋಷಣೆ ಮಾಡಲಾಗಿದೆ. ಸಿನಿಮಾ ನೋಡಿದ 14 ದಿನಗಳಲ್ಲಿ ಆಯ್ದ ಕೆಲವು ಮಂದಿಗೆ ಬಹುಮಾನ ಸಿಗಲಿದೆ.
![bharata bahubali on screen tomorrow](https://etvbharatimages.akamaized.net/etvbharat/prod-images/jan-dhan-1111579139901473-64_1601email_1579139912_111.jpg)
![bharata bahubali on screen tomorrow](https://etvbharatimages.akamaized.net/etvbharat/prod-images/jan-dhan-1121579139901474-73_1601email_1579139912_431.jpg)
ಅಂದ ಹಾಗೆ ಈ ಚಿತ್ರದ ಮೂಲಕ ಹಿರಿಯ ನಟ ಚರಣ್ ರಾಜ್ ಪುತ್ರ ತೇಜ್ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಸಿನಿಮಾದಲ್ಲಿ ಚಿಕ್ಕಣ್ಣ ಹಾಸ್ಯ ಮಜಭೂತಾಗಿದ್ದು, ನೋಡುಗರನ್ನು ನಗೆಗಡಲಲ್ಲಿ ತೇಲಿಸಲಿದೆ. ಇನ್ನು ಸಿನಿಮಾಕ್ಕೆ ಸಾರಾ ಹರೀಶ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಂಜು ಮಾಂಡವ್ಯ ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿದ್ದಾರೆ.
![bharata bahubali on screen tomorrow](https://etvbharatimages.akamaized.net/etvbharat/prod-images/sri-bharata-bahuhali-1111579139901413-32_1601email_1579139912_537.jpg)
ಸಿನಿಮಾದಲ್ಲಿ ಶ್ರೇಯ ಶೆಟ್ಟಿ, ಶ್ರುತಿ ಪ್ರಕಾಶ್, ಶ್ರೀನಿವಾಸಮೂರ್ತಿ, ಭವ್ಯ, ಅಚ್ಯುತ್ ಕುಮಾರ್, ಹರೀಶ್ ರೈ, ಜಾನ್ ಕೋಕೇನ್, ಅಯ್ಯಪ್ಪ ಪಿ ಶರ್ಮ, ಕರಿ ಸುಬ್ಬು, ಪುಷ್ಪ ಸ್ವಾಮಿ ಹಾಗೂ ಇತರರು ತಾರಗಣದಲ್ಲಿದ್ದಾರೆ. ಅತಿಥಿ ಪಾತ್ರದಲ್ಲಿ ನಟ ರಿಷಿ ಸಹ ಕಾಣಿಸಿಕೊಂಡಿದ್ದಾರೆ.