ಸ್ಯಾಂಡಲ್ವುಡ್ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಟಿಸಿ, ನಿರ್ಮಿಸುತ್ತಿರುವ 'ಭೈರಾದೇವಿ' ಶೂಟಿಂಗ್ ಕ್ಲೈಮಾಕ್ಸ್ ಹಂತಕ್ಕೆ ಬಂದಿದೆ.
ಚಿತ್ರದ ಲೀಡ್ ಸಾಂಗ್ ಚಿತ್ರೀಕರಣ ಬೆಂಗಳೂರಿನ ಶಾಂತಿನಗರ ಸ್ಮಶಾನದಲ್ಲಿ ಕಳೆದ ಮೂರು ದಿನಗಳಿಂದ ಭರ್ಜರಿಯಾಗಿ ನಡೆಯುತ್ತಿದೆ. ಈ ಹಾಡಿಗೆ ಸುಮಾರು 200ಕ್ಕೂ ಹೆಚ್ಚು ನೃತ್ಯ ಕಲಾವಿದರು, 800 ಕ್ಕೂ ಹೆಚ್ಚು ಕಲಾವಿದರು ಡಾನ್ಸ್ ಮಾಡಿದ್ದಾರೆ. ಕೋರಿಯೋಗ್ರಾಫರ್ ಮೋಹನ್ ಅದ್ಧೂರಿಯಾಗಿ ಭೈರಾದೇವಿಯ ನೃತ್ಯ ಸೆರೆ ಹಿಡಿಯುತ್ತಿದ್ದಾರೆ.
ರಾಧಿಕಾ ಈ ಚಿತ್ರದಲ್ಲಿ ನವ ದುರ್ಗೆಯರ ಅವತಾರದಲ್ಲಿ ಕಾಣಿಸಿಕೊಂಡಿದ್ದು, ನಿನ್ನೆ ಶೂಟ್ ಮಾಡ್ತಿದ್ದ ಸಾಂಗ್ನಲ್ಕಿ ನೀಲಿ ಬಣ್ಣಧ ದುರ್ಗೆಯ ಅವತಾರದಲ್ಲಿ ಸಖತ್ ಸ್ಟೆಪ್ ಹಾಕಿದ್ದಾರೆ. ಮೈ ತುಂಬಾ ನೀಲಿ ಬಣ್ಣ ಹಚ್ಚಿಕೊಂಡು, ನಿಂಬೆ ಹಣ್ಣಿನ ಹಾರ, ಕೈಯಲ್ಲಿ ತ್ರಿಶೂಲ ಹಿಡಿದು ಥೇಟ್ ಕಾಳಿಯ ಆಗೆ ಕಣ್ಣು ಬಿಟ್ಟು ಅಬ್ಬರಿಸ್ತಿದ್ದರು. ಕಳೆದ ಐದು ದಿನಗಳಿಂದ ರಾತ್ರಿ ವೇಳೆಯಲ್ಲೇ ಈ ಶೂಟಿಂಗ್ ನಡೆಯುತ್ತಿದೆ.
ಭೈರಾದೇವಿ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲದಲ್ಲೇ ತೆರೆಗೆ ಬರಲಿದೆ. ಚಿತ್ರದ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದ್ದು, ಈ ಸಾಂಗ್ ನಂತರ ಕುಂಬಳಕಾಯಿ ಒಡೆಯುತ್ತೇವೆ. ಈಗಾಗಲೇ ಕನ್ನಡ ವರ್ಸನ್ಗೆ ಡಬ್ಬಿಂಗ್ ಬಹುತೇಕ ಮುಕ್ತಾಯವಾಗಿದೆ. ಜೂನ್ ಅಥವಾ ಜುಲೈನಲ್ಲಿ ಅಭಿಮಾನಿಗಳಿಗೆ 'ಭೈರಾದೇವಿ' ದರ್ಶನ ಗ್ಯಾರಂಟಿ ಎನ್ನುತ್ತಾರೆ ನಿರ್ದೇಶಕ ಶ್ರೀ ಜೈ .