ETV Bharat / sitara

ರೂಪಾಂತರಗೊಂಡು ಬರುತ್ತಿದ್ದಾರೆ ‘ಭಾಗ್ಯವಂತರು’.. - ಹೊಸ ತಂತ್ರಜ್ಞಾನದೊಂದಿಗೆ ಭಾಗ್ಯವಂತರು ಸಿನಿಮಾ ರಿಲೀಸ್

ನರ್ತಕಿ ಚಿತ್ರಮಂದಿರ ಸೇರಿದಂತೆ ಕರ್ನಾಟಕದಾದ್ಯಂತ ‌100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭಾಗ್ಯವಂತರು ಚಿತ್ರ ಬಿಡುಗಡೆಯಾಗಲಿದೆ. ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ರಾಜ‌ ನನ್ನ ರಾಜ, ದಾರಿ ತಪ್ಪಿದ ಮಗ ಮುಂತಾದ ಚಿತ್ರಗಳ ವಿತರಣೆ ‌ಮಾಡಿದ್ದ ಮುನಿರಾಜು, ತಮ್ಮ ಮುನೇಶ್ವರ ಫಿಲಂಸ್ ನಡಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ..

soon
soon
author img

By

Published : Jan 5, 2021, 2:12 PM IST

ಬೆಂಗಳೂರು : ಡಾ. ರಾಜ್ ಕುಮಾರ್ ಅಭಿನಯದ ಒಂದೊಂದು ಸಿನಿಮಾಗಳು ಇಂದಿಗೂ ಕೆಲ ಸಿನಿಮಾ ವಿತರಕರ ಜೇಬು ತುಂಬಿಸುತ್ತಿವೆ. ಇದೀಗ 1977ರಲ್ಲಿ ರಿಲೀಸ್ ಆಗಿದ್ದ ಭಾರ್ಗವ ನಿರ್ದೇಶನದ ದ್ವಾರಕೀಶ್ ನಿರ್ಮಾಣದ ಡಾ.ರಾಜ್ ಕುಮಾರ್ ಮತ್ತು ಸರೋಜಾದೇವಿ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಭಾಗ್ಯವಂತರು’ ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ.

ಹೊಸ ತಂತ್ರಜ್ಞಾನದಲ್ಲಿ ಅಂದ್ರೆ, ಸಿನಿಮಾಸ್ಕೋಪ್ 7.1 ಮತ್ತು ಡಿಐ ಅಳವಡಿಸಲಾಗುತ್ತಿದ್ದು, ಹೊಸ ರೂಪದಲ್ಲಿ ಸಿನಿ ಅಭಿಮಾನಿಗಳ ಮುಂದೆ ಭಾಗ್ಯವಂತರು ಚಿತ್ರ ಬರುತ್ತಿದೆ. ಕಳೆದ ವರ್ಷ ಅಣ್ಣಾವ್ರ ಹುಟ್ಟುಹಬ್ಬಕ್ಕೆ ಈ ಚಿತ್ರ ರಿ ರಿಲೀಸ್ ಆಗಬೇಕಿತ್ತು. ಆದರೆ, ಲಾಕ್‌ಡೌನ್ ಪರಿಣಾಮ, ವಿತರಕ ಮುನಿರಾಜ್ ಚಿತ್ರವನ್ನು ರಿಲೀಸ್ ಮಾಡಿರಲಿಲ್ಲ. ಫೆಬ್ರವರಿ ಮೊದಲ ವಾರದಲ್ಲಿ ಭಾಗ್ಯವಂತರು ಸಿನಿಮಾವನ್ನ ಮರು ಬಿಡುಗಡೆ ಮಾಡುತ್ತಿದ್ದಾರೆ.

soon
ಡಾ. ಪಾರ್ವತಮ್ಮ, ಡಾ.ರಾಜ್​ಕುಮಾರ್

ನರ್ತಕಿ ಚಿತ್ರಮಂದಿರ ಸೇರಿದಂತೆ ಕರ್ನಾಟಕದಾದ್ಯಂತ ‌100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಭಾಗ್ಯವಂತರು ಚಿತ್ರ ಬಿಡುಗಡೆಯಾಗಲಿದೆ. ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ರಾಜ‌ ನನ್ನ ರಾಜ, ದಾರಿ ತಪ್ಪಿದ ಮಗ ಮುಂತಾದ ಚಿತ್ರಗಳ ವಿತರಣೆ ‌ಮಾಡಿದ್ದ ಮುನಿರಾಜು, ತಮ್ಮ ಮುನೇಶ್ವರ ಫಿಲಂಸ್ ನಡಿ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.

ಪ್ರಸ್ತುತ ಕೃಷ್ಣಾಚಾರಿ ಚಿತ್ರದ ನಿರ್ಮಾಪಕರು ಆಗಿರುವ ಮುನಿರಾಜು, ನನಗೆ ಡಾ. ರಾಜ್​ಕುಮಾರ್ ಮತ್ತು ಪಾರ್ವತಮ್ಮ ರಾಜ್‍ಕುಮಾರ್ ಅವರ ಬಗ್ಗೆ ವಿಶೇಷ ಗೌರವ. ಅವರೇ ನನಗೆ ಭಾಗ್ಯವಂತರು ಅಂತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.