ಬೆಲ್ ಬಾಟಮ್ 2019ರ ಸೂಪರ್ ಹಿಟ್ ಚಿತ್ರ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಅಲ್ಲದೇ ತೆಲುಗು ತಮಿಳಿಗೂ ಈ ಚಿತ್ರ ಹಾರಿತು. ಇನ್ನು ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯ ಕಾಂಬಿನೇಷನ್ ಸಿನಿಪ್ರಿಯರಿಗೆ ಸಖತ್ತಾಗಿ ಕಿಕ್ ಕೊಟ್ಟಿತ್ತು. ಅದರಲ್ಲೂ ಏತಕೇ ಬೊಗಸೆ ತುಂಬ ಆಸೆ ನೀಡುವೇ ಸಾಂಗ್ ಒಳ್ಳೆ ಮೈಲೇಜ್ ಕೊಟ್ಟಿತು.
ಈ ಹಾಡು ಡಬ್ ಸ್ಮಾಶ್, ಟಿಕ್ ಟಾಕ್ನಲ್ಲೂ ವೈರಲ್ ಆಗಿತ್ತು. ವಿಶೇಷ ಅಂದ್ರೆ ಈ ಹಾಡು ಬಂದು ವರ್ಷ ಕಳೆದ್ರೂ ಕೂಡ ಇನ್ನೂ ಹಾಡಿನ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಹೌದು ಈ ಹಾಡು ಎಷ್ಟು ವೈರಲ್ ಆಗಿದೆ ಅಂದ್ರೆ ಹೊಸದಾಗಿ ಮದುವೆ ಆಗುವ ಜೋಡಿಯೊಂದು ಏತಕೇ ಬೊಗಸೆ ತುಂಬ ಆಸೆ ನೀಡುವೆ ಹಾಡಿನ ಪಿಕ್ಚರೈಜೇಶನ್ ರೀತಿಯಲ್ಲೇ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿ ಗಮನ ಸೆಳೆದಿದೆ.
ವಿಶೇಷ ಅಂದ್ರೆ ಈ ಜೋಡಿ ಬೆಲ್ ಬಾಟಮ್ ಹಾಡಿನ ಶೈಲಿಯಲ್ಲೇ ರೆಟ್ರೋ ಲುಕ್ನಲ್ಲಿ ಫೋಟೋ ಶೂಟ್ ಮಾಡಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ. ಅದ್ರೆ ಈ ಜೋಡಿ ಯಾರು ಎಲ್ಲಿಯವರು ಅವರ ಹೆಸರೇನು ಎಂಬುದು ಮಾತ್ರ ತಿಳಿದಿಲ್ಲ.