ETV Bharat / sitara

ಲೆಜೆಂಡ್ ನಟನ ಜೊತೆ ಅಭಿನಯಿಸಿರೋದು ನನಗೆ ತುಂಬಾ ಹೆಮ್ಮೆ ಆಗುತ್ತೆ: ಯುವ ಖಳನಟ ಪ್ರಸನ್ನ - villain Prasanna Interview news 2021

ನಾನು ಶಿವಣ್ಣನ ಅಭಿಮಾನಿ. ಕಾಲೇಜು​ ದಿನಗಳಲ್ಲಿ ಅವರ ಸತ್ಯ ಈಸ್​ ಇನ್ ಲವ್ ಸಿನಿಮಾ ನೋಡಿ ಆ ರೀತಿಯೇ ಹೇರ್ ಸ್ಟೈಲ್ ಮಾಡಿಸಿದೆ. ಈಗ ಅಂತಹ ಲೆಜೆಂಡ್ ನಟನ ಜೊತೆ ಅಭಿನಯಿಸಿರೋದು ನನಗೆ ತುಂಬಾ ಹೆಮ್ಮೆ ಆಗುತ್ತೆ ಎಂದು ಭಜರಂಗಿ 2 ಸಿನೆಮಾ ವಿಲನ್ ಪಾತ್ರಧಾರಿ ಪ್ರಸನ್ನ ತಿಳಿಸಿದ್ದಾರೆ.

Bajarangi 2 Cinema Poster
ಭಜರಂಗಿ 2 ಸಿನೆಮಾ ಪೋಸ್ಟರ್​
author img

By

Published : Oct 28, 2021, 8:42 PM IST

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಟನೆ ಹಾಗೂ ನಿರ್ದೇಶಕ ಎ. ಹರ್ಷ ನಿರ್ದೇಶನದ ಚಿತ್ರ 'ಭಜರಂಗಿ 2' ರಿಲೀಸ್​ಗೆ ಕೌಂಟ್​ಡೌನ್​ ಶುರುವಾಗಿದೆ. ಈ ಚಿತ್ರದಲ್ಲಿ ಮೂರು ಜನ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಸಾಲಿನಲ್ಲಿ ಜಾಗ್ರವ ಪಾತ್ರ ಮಾಡಿರೋ ಪ್ರಸನ್ನ ಅವರನ್ನು ಸಂದರ್ಶನ ಮಾಡಲಾಗಿದ್ದು, ತಮ್ಮ ಸಿನಿ ಪಯಣದ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಯುವ ಖಳನಟ ಪ್ರಸನ್ನ

ಕಳೆದ ಒಂಬತ್ತು ವರ್ಷಗಳಿಂದ ಹಲವು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ಪ್ರಸನ್ನ ನಟಿಸಿದ್ದಾರೆ. ಇದೀಗ ಭಜರಂಗಿ 2 ಸಿನಿಮಾದಲ್ಲಿ ಭಯ ಹುಟ್ಟಿಸುವ ಜಾಗ್ರವ ಎಂಬ ರಾಕ್ಷಸನ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಪ್ರಸನ್ನ ಈಟಿವಿ ಭಾರತ್​ ಜೊತೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಭಜರಂಗಿ 2 ಸಿನಿಮಾದಲ್ಲಿ ನಾನು ಜಾಗ್ರವ ಪಾತ್ರ ಮಾಡಿದ್ದೇನಿ. ಇದರಲ್ಲಿ ನಾನು 85 ವರ್ಷದ ವಿಲನ್ ಪಾತ್ರ ಮಾಡಿದ್ದೇನಿ. ನಟಿಸುವಾಗ ನನ್ನ ಮೇಲೆ 8 ಕೆಜಿಯ ಕಾಸ್ಟ್ಯೂಮ್‌ ಇತ್ತು. ಜತೆಗೆ ಹೀಲ್ಡ್‌ ಚಪ್ಪಲಿ ಎಲ್ಲವೂ ಸೇರಿ 6 ಅಡಿ ಇರುವ ನಾನು 8 ಅಡಿ ಎತ್ತರ ಕಾಣುತ್ತಿದ್ದೆ ಎಂದಿದ್ದಾರೆ.

ಶೂಟಿಂಗ್ ಟೈಮಲ್ಲಿ ದೊಡ್ಡದಾದ ಕಿರೀಟ, ಉದ್ದವಾದ ಬಿಳಿ ಗಡ್ಡ, ಭಯ ಹುಟ್ಟಿಸುವ ಆ ಕಣ್ಣುಗಳನ್ನ ನೋಡಿ ಸೆಟ್ಟು ಹುಡುಗರು ಕೂಡ ಹೆದರಿ ಓಡಿ ಹೋಗಿದ್ದಾರೆ. ನನ್ನ ಪಾತ್ರ ಭಜರಂಗಿ 2 ಸಿನಿಮಾದಲ್ಲಿ ಸೆಕೆಂಡ್ ಆಫ್​ನಲ್ಲಿ ಬರಲಿದೆ ಎಂದು ತಿಳಿಸಿದ್ದಾರೆ.

ನಾನು ಶಿವಣ್ಣನ ಅಭಿಮಾನಿ. ಕಾಲೇಜ್​ ದಿನಗಳಲ್ಲಿ ಅವರ ಸತ್ಯ ಈಸ್​ ಇನ್ ಲವ್ ಸಿನಿಮಾ ನೋಡಿ ಆ ರೀತಿಯೇ ಹೇರ್ ಸ್ಟೈಲ್ ಮಾಡಿಸಿದೆ. ಈಗ ಅಂತಹ ಲೆಜೆಂಡ್ ನಟನ ಜೊತೆ ಅಭಿನಯಿಸಿರೋದು ನನಗೆ ತುಂಬಾ ಹೆಮ್ಮೆ ಆಗುತ್ತೆ ಎಂದು ಹೇಳಿದ್ದಾರೆ.

bajarangi-2-villain-prasanna
ಭಜರಂಗಿ 2 ಸಿನೆಮಾ ವಿಲನ್ ಪಾತ್ರಧಾರಿ ಪ್ರಸನ್ನ

ಇದರ ಜೊತೆಗೆ ಶಿವಣ್ಣನ ಬಗ್ಗೆ ಒಂದು ಮಾತು ಹೇಳಬೇಕು. ಶಿವಣ್ಣ ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಕೂಡ ಸಖತ್ ಸಿಂಪಲ್ ವ್ಯಕ್ತಿ. ನಾವು ಭಜರಂಗಿ 2 ಸಿನಿಮಾದಲ್ಲಿ ಇಷ್ಟು ಚೆನ್ನಾಗಿ ಅಭಿನಯಿಸೋಕ್ಕೆ ಮುಖ್ಯ ಕಾರಣ ಶಿವಣ್ಣ ಮತ್ತು ನಿರ್ದೇಶಕ ಹರ್ಷ ಎಂದಿದ್ದಾರೆ.

ಜಾಗ್ರವ ಪಾತ್ರಕ್ಕೆ ರೆಡಿಯಾಗೋದಿಕ್ಕೆ ನಾಲ್ಕು ಗಂಟೆ ಬೇಕಾಗಿತ್ತು. ಆ ಕಿರೀಟ, ಆ ಗಡ್ಡ ಮತ್ತೆ ಮೇಕಪ್ ಮಾಡಿಕೊಳ್ಳೋದಿಕ್ಕೆ ಗಂಟೆ ಗಟ್ಟಲೆ ಟೈಮ್ ಹಿಡಿಯುತ್ತಿತ್ತು. ನಮ್ಮಂಥ ಹೊಸ ಪ್ರತಿಭೆಗಳಿಗೆ ಸಪೋರ್ಟ್ ಮಾಡುವ ಗುಣ ಶಿವಣ್ಣ ಅವರಲ್ಲಿದೆ ಅಂತಾರೆ ಪ್ರಸನ್ನ.

ಓದಿ: ಸಾಧುಕೋಕಿಲ ನಿರ್ದೇಶನದ ಮಹಾಯೋಗಿ ಸಿದ್ಧಾರೂಢ ಚಿತ್ರಕ್ಕೆ ಪವರ್ ಸ್ಟಾರ್ ಸಾಥ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.