ಮನರಂಜನೆಯ ವಾಹಿನಿ ಸ್ಟಾರ್ ಸುವರ್ಣ ಇದೀಗ ಹೊಸತನದೊಂದಿಗೆ ಬದಲಾಗಲಿದೆ. ವಾಹಿನಿಯ ಹೊಸ ಲುಕ್ ಇದೀಗ 'ಬದಲಾವಣೆಯ ಬೆಳಕು' ಎಂಬ ಟ್ಯಾಗ್ ಲೈನ್ ಮೂಲಕ ಬೆಳಗಲು ಮುಂದಾಗಿದೆ.
ನವೆಂಬರ್ 22ರಂದು ಸಂಜೆ 6 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬದಲಾವಣೆಯ ಬೆಳಕಿಗೆ ಚಾಲನೆ ನೀಡಲಿದ್ದಾರೆ.
ಇನ್ಮುಂದೆ ಸ್ಟಾರ್ ಸುವರ್ಣ ವಾಹಿನಿಯ ಪ್ರತಿ ಫ್ರೇಮಿನಲ್ಲೂ ಬದಲಾವಣೆಯ ಬೆಳಕಿನ ಝಲಕ್ ಕಾಣಿಸಿಲಿದೆ. ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಧಾರಾವಾಹಿಯ ಟೀಸರ್ ಲಾಂಚ್ ಮಾಡಿದ್ದಾರೆ.
ಪುನೀತ್ ರಾಜ್ಕುಮಾರ್, ರಚಿತಾ ರಾಮ್, ಹರಿಪ್ರಿಯಾ ಮತ್ತು ಸ್ಟಾರ್ ಸುವರ್ಣ ವಾಹಿನಿಯ ಕಲಾವಿದರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮ ನ. 22ರಂದು ಪ್ರಸಾರವಾಗಲಿದೆ.