ಬಾಲಿವುಡ್ನ ದಿವಂಗತ ನಟ ಇರ್ಫ್ರಾನ್ ಖಾನ್ ಹಿರಿಯ ಪುತ್ರ ಬಬಿಲ್ ತಮ್ಮ ತಂದೆಯ ಜೊತೆಗಿನ ಅಪರೂಪದ ಫೋಟೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಅಪ್ಪನ ಜೊತೆ ಕಳೆದ ಸಮಯದ ಅನುಭವಗಳನ್ನು ಸಾಲುಗಳ ಮೂಲಕ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ಬಬಿಲ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿರುವ ಫೋಟೋದಲ್ಲಿ ಇರ್ಫಾನ್ ಮತ್ತು ಬಬಿಲ್ ಜೊತೆಗೆ ಕುಳಿತಿದ್ದಾರೆ. ಈ ಫೋಟೋ ಹಾಕಿ ಬರೆದಿರುವ ಬಬಿಲ್, ನಮಗೆ ಹತ್ತಿರವಾಗಿರುವವರ ಸಾವು ನೀಡುವ ನೋವು ಬಹಳ ದುಃಖ ತರುತ್ತದೆ. ಆದರೆ, ಸಾವು ಪ್ರಾರಂಭ ಎಂದು ನೀವು ಕಲಿಸಿದ್ದೀರಿ. ನಿಮ್ಮ ಜೀವನವನ್ನು ನನ್ನ ಮನಸ್ಸಿನಲ್ಲೇ ಸಂಭ್ರಮಿಸುತ್ತ ಬದುಕುತ್ತೇನೆ ಎಂದು ಬರೆದಿದ್ದಾರೆ.
ತಮ್ಮ ಬರಹ ಮುಂದುವರೆಸಿರುವ ಬಬಿಲ್, ನಾನು ಮತ್ತು ನೀವು ಬಾಗಿಲ ಬಳಿ ನಿಂತು ಹಾಡುತ್ತಿದ್ದ ಹಾಡುಗಳನ್ನು ನಾನು ಈಗಲೂ ನೆನಪಿಸಿಕೊಂಡು ಹಾಡುತ್ತೇನೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
ಆಗಾಗ ಬಬಿಲ್ ಮತ್ತು ಆತನ ತಾಯಿ ಸುತಾಪ ಸಿಕ್ದರ್ ಸುಶಾಂತ್ ಸಿಂಗ್ ಅವರ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಾಲಿವುಡ್ನ ಹಿರಿಯ ನಟನಾಗಿದ್ದ ಇರ್ಫಾನ್ ಕಳೆದ ಏಪ್ರಿಲ್ 29ರಂದು ಮುಂಬೈನಲ್ಲಿ ಸಾವನ್ನಪ್ಪಿದ್ದರು.