ಬೆಂಗಳೂರು: ಕನ್ನಡದ ಮೊದಲ ಹಿಂದುಸ್ತಾನಿ ಸಂಗೀತ ದಿಗ್ಗಜ ಭೀಮಸೇನ್ ಜೋಶಿ. ಹಿಂದುಸ್ತಾನಿ ಸಂಗೀತದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಭೀಮಸೇನ್ ಜೋಶಿ ಅವರಿಗೆ ಇದೀಗ ಪುಟಾಣಿ ಅಭಿಮಾನಿಯೊಬ್ಬರು ಹುಟ್ಟಿಕೊಂಡಿದ್ದಾರೆ. ಅವ್ರೇ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳು ಐರಾ.
ಆಗಾಗ ತನ್ನ ತೊದಲು ಮಾತು, ಮುದ್ದಾದ ಆಟಗಳಿಂದ ಸ್ಟಾರ್ ಕಿಡ್ ಎನಿಸಿಕೊಂಡಿರುವ ರಾಕಿ ಭಾಯ್ ಮಗಳು ಐರಾ, ಭೀಮಸೇನ್ ಜೋಶಿಯವರ ಹಾಡನ್ನ ಹಾಡುವ ಮೂಲಕ ಗಮನ ಸೆಳೆದಿದ್ದಾಳೆ.
ಸದ್ಯದಲ್ಲೇ ಎರಡನೇ ವರ್ಷಕ್ಕೆ ಕಾಲಿಡಲಿರೋ ಐರಾ, ಅಮ್ಮ ರಾಧಿಕಾ ಪಂಡಿತ್ ಹೇಳಿಕೊಟ್ಟಿರುವ ಭೀಮಸೇನ್ ಜೋಶಿಯವರ ಹಾಡು ಹಾಡುತ್ತಾ, ಆಟ ಆಡುತ್ತಿದ್ದಾಳೆ. ಕನ್ನಡದ ಶಾಸ್ತ್ರೀಯ ಸಂಗೀತ ಗಾಯಕರಾದ ಭೀಮಸೇನ್ ಜೋಶಿ ಅವರ ಸದಾ ಎನ್ನ ಹೃದಯದಲ್ಲಿ ವಾಸ ಮಾಡೋ ಶ್ರೀಹರಿ ಎಂಬ ಹಾಡನ್ನು ಐರಾ ಮುದ್ದು ಮುದ್ದಾಗಿ ಹಾಡಿದ್ದಾಳೆ.
ಇತ್ತೀಚಿಗೆ ರಾಕಿಂಗ್ ಸ್ಟಾರ್ ಯಶ್ ಮಗ ಯಥರ್ವನಿಗೆ ಜಾನಿ ಜಾನಿ ಯೆಸ್ ಪಪ್ಪಾ ಎಂಬ ರೈಮ್ಸ್ ಹೇಳಿಕೊಡುವ ವಿಡಿಯೋ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿತ್ತು. ಈಗ ರಾಧಿಕಾ ಪಂಡಿತ್ ಮಗಳು ಐರಾಗೆ ಶಾಸ್ತ್ರೀಯ ಸಂಗೀತ ಹೇಳಿಕೊಡುವ ಪ್ರಯತ್ನ ಮಾಡಿದ್ದಾರೆ. ಹಾಗೇ ಮಗಳು ಭೀಮಸೇನ್ ಜೋಶಿ ಅವರ ಪುಟ್ಟ ಅಭಿಮಾನಿ ಅಂತ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯ ಅಂತಾ ರಾಧಿಕಾ ಪಂಡಿತ್ ಶುಭ ಕೋರಿದ್ದಾರೆ.