ತುಪ್ಪದ ಹುಡುಗಿ, ಹಾಟ್ ಬೊಂಬೆ ಎಂದೇ ಹೆಸರಾದ ರಾಗಿಣಿ ದ್ವಿವೇದಿಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. 29 ನೇ ವಸಂತಕ್ಕೆ ಕಾಲಿಡುತ್ತಿರುವ ನಟಿ ರಾಗಿಣಿ ಹುಟ್ಟುಹಬ್ಬವನ್ನುಅವರ ಮೇಕಪ್ ಮ್ಯಾನ್ ಹಾಗೂ ಸಹಾಯಕರು ಸೇರಿ ಇಂದು ಸರಳವಾಗಿ ಆಚರಿಸಿದ್ದಾರೆ.
ಕ್ಯಾರವಾನ್ನಲ್ಲೇ ಕೇಕ್ ಕಟ್ ಮಾಡುವ ಮೂಲಕ ಮೇಕಪ್ ಮ್ಯಾನ್ ಹಾಗೂ ಅಸಿಸ್ಟೆಂಟ್ಗಳ ಜೊತೆ ರಾಗಿಣಿ ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಾಳೆ ತಮ್ಮ ಹುಟ್ಟುಹಬ್ಬದ ಅಂಗವಾಗಿ ಒಂದಷ್ಟು ಸಮಾಜಸೇವೆ ಮಾಡಲು ಪ್ಲ್ಯಾನ್ ಮಾಡಿಕೊಂಡಿರುವ ರಾಗಿಣಿ ಲಾಕ್ಡೌನ್ನಿಂದ ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕ್ಯಾರವಾನ್ ಚಾಲಕರಿಗೆ ಅಗತ್ಯ ವಸ್ತುಗಳನ್ನು ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ರಾಗಿಣಿ ಕೊರೊನಾ ಲಾಕ್ಡೌನ್ ಆರಂಭವಾದಾಗಿನಿಂದ ಮನೆಯಲ್ಲಿ ಸುಮ್ಮನೆ ಕೂರದೆ, ಕೊರೊನಾಗೂ ಹೆದರದೆ ಸಮಾಜಸೇವೆ ಮಾಡುತ್ತಿದ್ದಾರೆ. ಈಗಾಗಲೇ ನಿರ್ಗತಿಕರಿಗೆ ರಾಗಿಣಿ ಸಾಕಷ್ಟು ಸಹಾಯ ಮಾಡಿದ್ದಾರೆ. ರಾಗಿಣಿ ಅವರ ಸಮಾಜಸೇವೆ ಇದೇ ರೀತಿ ಮುಂದುವರೆಯಲಿ, ಅವರ ಎಲ್ಲಾ ಸಿನಿಮಾಗಳು ಯಶಸ್ಸು ಕಾಣಲಿ ಎಂಬುದೇ ನಮ್ಮ ಹಾರೈಕೆ.