ಬೆಂಗಳೂರು: ಸಿಲಿಕಾನ್ ಸಿಟಿಯ ಏಷ್ಯಾ ವೆಡ್ಡಿಂಗ್ ಫೇರ್ಗೆ ಸ್ಯಾಂಡಲ್ವುಡ್ನ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ಚಾಲನೆ ನೀಡಿದ್ರು.
ಕಣ್ಣು ಕುಕ್ಕುವ ಆಭರಣಗಳು ಮಿರಮಿರ ಮಿಂಚುವ ಗೌನ್‌ಗಳು, ಅಟ್ರಾಕ್ಟ್ ಮಾಡುವ ಮೇಕಪ್ಗಳು ಅಬ್ಬಾ! ಅನ್ನಿಸುವ ಫ್ಲವರ್ ಡೆಕೋರೇಷನ್, ಮದುವೆಯ ವಿಡಿಯೋವನ್ನು ತ್ರೀಡಿ ಮೂಲಕ ನೋಡುವುದು...ಇವೆಲ್ಲ ಒಂದೇ ಸೂರಿನಡಿ ಇದೀಗ ಪ್ರದರ್ಶನಗೊಂಡಿವೆ. ಅದು ಬೆಂಗಳೂರಿನ ಜೆಡಬ್ಲ್ಯು ಮ್ಯಾರಿಯಟ್ ಹೋಟೆಲ್ನಲ್ಲಿ.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಏಷ್ಯಾ ವೆಡ್ಡಿಂಗ್ ಫೇರ್ ಇದಾಗಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
25ಕ್ಕೂ ಹೆಚ್ಚು ಜ್ಯುವೆಲ್ಸ್ ಬ್ರಾಂಡ್, ವೆಡ್ಡಿಂಗ್ ವೇರ್, ಪಾರ್ಟಿವೇರ್ ಅದಕ್ಕೆ ಹೊಂದುವ ಮೇಕಪ್, ಫೋಟೋಶೂಟ್ ಎಲ್ಲವೂ ಇಲ್ಲಿವೆ. ಬ್ರೈಡಲ್ ಮೇಕಪ್ ಬ್ರೈಡಲ್ ಆಭರಣ, ಎಥ್ನಿಕ್ ಉಡುಪುಗಳು, ವಿವಾಹ ಸಂದರ್ಭದಲ್ಲಿ ನೀಡುವ ಉಡುಗೊರೆಗಳು ಪ್ರಮುಖವಾಗಿವೆ.
ಅಕ್ಟೋಬರ್ 11ರಿಂದ 13ರವರೆಗೆ ಬೆಳಗ್ಗೆ 10.30 ರಿಂದ ರಾತ್ರಿ 8ರವರೆಗೆ ಈ ಪ್ರದರ್ಶನ ನಡೆಯಲಿದೆ.