ETV Bharat / sitara

ಕಿರುತೆರೆ ನಂತರ ಹಿರಿತೆರೆಯಲ್ಲಿ ಬ್ಯುಸಿಯಾದ ಅರ್ಜುನ್ ಯೋಗೇಶ್

ಅರಮನೆ ಗಿಳಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಅಭಿನಯಿಸುತ್ತಿದ್ದ, ಅರ್ಜುನ್ ಯೋಗೇಶ್ ಇದೀಗ ಕಿರುತೆರೆಯ ನಂತರ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ತಯಾರಾಗಿದ್ದಾರೆ

ಕಿರುತೆರೆ ನಂತರ ಹಿರಿತೆರೆಯಲ್ಲಿ ಬ್ಯುಸಿಯಾದ ಅರ್ಜುನ್ ಯೋಗೇಶ್
ಕಿರುತೆರೆ ನಂತರ ಹಿರಿತೆರೆಯಲ್ಲಿ ಬ್ಯುಸಿಯಾದ ಅರ್ಜುನ್ ಯೋಗೇಶ್
author img

By

Published : Feb 18, 2021, 7:01 PM IST

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಗಿಳಿ ಧಾರಾವಾಹಿಯಲ್ಲಿ ನಾಯಕ ಅರ್ಜುನ್ ಆಗಿ ಅಭಿನಯಿಸುತ್ತಿದ್ದ, ಅರ್ಜುನ್ ಯೋಗೇಶ್ ಇದೀಗ ಕಿರುತೆರೆಯ ನಂತರ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ತಯಾರಾಗಿದ್ದಾರೆ. ಶ್ರೀರಾಜ್ ನಿರ್ದೇಶನದ ಲಾಂಗ್ ಡ್ರೈವ್ ಸಿನಿಮಾದಲ್ಲಿ ನಾಯಕರಾಗಿ ಅರ್ಜುನ್ ಯೋಗೇಶ್ ನಟಿಸಲಿದ್ದಾರೆ. ಅಂದ ಹಾಗೇ ಈ ಸಿನಿಮಾದಲ್ಲಿ ನಾಯಕಿಯರಾಗಿ ನಟಿಸುತ್ತಿರುವುದು ಕೂಡಾ ಕಿರುತೆರೆ ಕಲಾವಿದರುಗಳು ಎಂಬುದು ವಿಶೇಷ. ಹೌದು, ಸುಪ್ರೀತಾ ಸತ್ಯನಾರಾಯಣ ಹಾಗೂ ತೇಜಸ್ವಿನಿ ಅವರು ಈ ಸಿನಿಮಾದಲ್ಲಿ ನಾಯಕಿಯರಾಗಿ ಅಭಿನಯಿಸಲಿದ್ದಾರೆ.

ಅರ್ಜುನ್ ಯೋಗೇಶ್
ಅರ್ಜುನ್ ಯೋಗೇಶ್

ಕಾಲೇಜು ದಿನಗಳಿಂದಲೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಯೋಗೇಶ್ ಜೂನಿಯರ್ ಕಲಾವಿದನಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. ಬಿಇ ಓದುತ್ತಿರುವಾಗಲೇ ಕಾಲೇಜಿನ ಹಲವು ನಾಟಕಗಳಲ್ಲಿ ಮೈಮ್ ಶೋಗಳಲ್ಲಿ ವೇದಿಕೆ ಮೇಲೆ ಕಾಣಿಸಿಕೊಂಡ ಅರ್ಜುನ್ ಯೋಗೇಶ್ ಹಿರಿಯ ಕಲಾವಿದೆ ಕಲ್ಯಾಣಿ ಪ್ರದೀಪರ ತಂಡದಲ್ಲಿ ಮೂರು ನಾಟಕಗಳಲ್ಲಿ ನಟಿಸಿದರು. ಪುನೀತ್ ರಾಜ್ ಕುಮಾರ್ ಅಭಿನಯದ ಅಣ್ಣಾಬಾಂಡ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸುವ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು.

ಅರ್ಜುನ್ ಯೋಗೇಶ್
ಅರ್ಜುನ್ ಯೋಗೇಶ್

ಮುಂದೆ ಸಂಜೀವ ತಗಡೂರು ಅವರ ಚಲಿಸುವ ಮೋಡಗಳು ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ ಶ್ರೀನಿವಾಸ ಶಿಡ್ಲಘಟ್ಟ ಅವರ ಅಮ್ಮಾ ನಿನಗಾಗಿ ಧಾರಾವಾಹಿಯಲ್ಲಿಯೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಅರ್ಜುನ್ ಯೋಗೇಶ್ ಗೆ ಕಿರುತೆರೆಯಲ್ಲಿ ಬ್ರೇಕ್ ನೀಡಿದ್ದು ಅಕ್ಕ ಧಾರಾವಾಹಿ.

ಅರ್ಜುನ್ ಯೋಗೇಶ್
ಅರ್ಜುನ್ ಯೋಗೇಶ್

ಅಕ್ಕ ಧಾರಾವಾಹಿಯ ಮೂಲಕ ಮನೆ ಮಾತಾದ ಅರ್ಜುನ್ ಯೋಗೇಶ್ ಕವಿರಾಜ್ ನಿರ್ದೇಶನದ ಮದುವೆಯ ಮಮತೆಯ ಕರೆಯೋಲೆ ಚಿತ್ರದಲ್ಲಿ ಎರಡನೇ ನಾಯಕನಾಗಿ ನಟಿಸಿದರು. ಮುಂದೆ ಏನೆಂದು ಹೆಸರಿಡಲಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಅರ್ಜುನ್ ನನ್ನ ಪ್ರಕಾರ, ಚೇಜ್ ಚಿತ್ರಗಳಲ್ಲಿ ನಟಿಸಿದರು. ಇದೀಗ ಲಾಂಗ್ ಡ್ರೈವ್ ಸಿನಿಮಾದಲ್ಲಿ ನಾಯಕರಾಗಿ ಮೋಡಿ ಮಾಡಲಿದ್ದು, ಮತ್ತೆ ಕಿರುತೆರೆಗೆ ಮರಳುತ್ತಾರಾ ಕಾದು ನೋಡಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.